December 22, 2024

Newsnap Kannada

The World at your finger tips!

revanna

ಮರಿತಿಬ್ಬೇಗೌಡ MLC ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ – ರೇವಣ್ಣ

Spread the love

ಮರಿತಿಬ್ಬೇಗೌಡ MLC ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ ಎಂದು ಎಚ್ ಡಿ ರೇವಣ್ಣ ಸವಾಲು ಹಾಕಿದ್ದಾರೆ

ಇದನ್ನು ಓದಿ –ಕೊರಿಯನ್ ವೀಡಿಯೋ ನೋಡುವ ಹವ್ಯಾಸ : ಖಿನ್ನತೆಯಿಂದ ವಿದ್ಯಾರ್ಥಿನಿ ಆತ್ಮಹತ್ಮೆ

ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ ದಕ್ಷಿಣ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ. ಪಕ್ಷ ಮತ್ತು ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ ಎಂದರು

ನಮ್ಮ ಪಕ್ಷದಲ್ಲಿ ಎಲ್ಲಾ ಊಟ ಮಾಡಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಅಂದರೆ ಇವರ ಹೇಗೆ ಉಪಸಭಾಪತಿ ಆಗಿದ್ದಾರೆ. ಎರಡು ಸಲ ಎಂಎಲ್‍ಸಿ ಮಾಡಿದ್ದೇವೆ ಇನ್ನೇನು ಮಾಡ್ಬೇಕು. ಹಾಗೇನಾದರೂ ಇದ್ದರೆ ಓಪನ್ ಆಗಿ ಹೇಳಿ, ಹಿಂದಿನಿಂದ ಯಾಕೆ ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದರು ಅ

ಜೆಡಿಎಸ್ ನಿಂದ ನನಗೆ ಅನ್ಯಾಯವಾಗಿದೆ ಅಂತಾ ಹೇಳಿ ರಾಜೀನಾಮೆ ಕೊಡಲಿ. ನಂತರ ಓಪನ್ ಆಗಿ ಪ್ರಚಾರ ಮಾಡ್ಲಿ, ಕಾಂಗ್ರೆಸ್ ಸೇರಿ ಮತ್ತೆ ಗೆಲ್ಲಲಿ. ಅವರು ದೊಡ್ಡವರಿದ್ದಾರೆ, ಅನುಭವಿಗಳಿದ್ದಾರೆ. ಇಂತಹ ನಿಲುವಿಗೆ ಹೋಗಬಾರದಿತ್ತು ಎಂಬುದು ನನ್ನ ಭಾವನೆ. ನಿಮಗಾಗಿ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ಗೊತ್ತಿದೆ. ಅದೆಲ್ಲಾ ಯಾವಾತ್ತಾದರೂ ತಿರುಗು ಬಾಣವಾಗುತ್ತೆ, ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬೆಂಬಲ ಕೇಳುವೆ :

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ. ಹೀಗಾಗಿ ನಮ್ಮಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರುವೆ ಎಂದರು

ಮಾಜಿ ಪ್ರಧಾನಿ ದೇವೇಗೌಡರು ಎಂತಹದ್ದನ್ನೆಲ್ಲಾ ಬಿಟ್ಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಉಳಿಯಲಿ. , ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರ್ತೀವಿ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು.

ಸಿದ್ದರಾಮಯ್ಯ ಅವರು ಸ್ವಲ್ಪ ಕೂಲ್ ಆಗಲಿ, ನಾನೂ ಹೋಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ನಂಬಿಕೆಯಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂದ್ರೆ ನಾವೆಲ್ಲಾ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!