ಟಿ ನರಸೀಪುರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ : ರುಂಡ – ಮುಂಡ ಬೇರೆ

Team Newsnap
1 Min Read

ಟಿ ನರಸೀಪುರ ತಾಲೂಕಿನಲ್ಲಿ ಮತ್ತೆ ನರಭಕ್ಷಕ ಚಿರತೆಯ ಅಟ್ಟಹಾಸ ಮುಂದುವರಿದಿದೆ ನಿನ್ನೆ (ಶನಿವಾರ) ರಾತ್ರಿ 11 ವರ್ಷದ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿ, ಕೊಂದು ಹಾಕಿದೆ.

ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ 11 ವರ್ಷದ ಜಯಂತ್ ಮೃತ ಬಾಲಕ ಎಂದು ಗುರುತಿಸಲಾಗಿದೆ.

ಜಯಂತ್‍ನನ್ನು ಚಿರತೆ ಎಳೆದೊಯ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹುಡುಕಾಟ ನಡೆಸಿದರು. ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ ಬಾಲಕನ ದೇಹವನ್ನು ಚಿರತೆ ತಿಂದು ಹಾಕಿದೆ. ಮುಂಡ – ರಂಡ ಬೇರೆ ಬೇರೆ ಮಾಡಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಅರಣ್ಯಧಿಕಾರಿಗಳು, ಶಾಸಕ ಅಶ್ವಿನ್ ಕುಮಾರ್, ಪೊಲೀಸರು ಭೇಟಿ ನೀಡಿದ್ದಾರೆ. ಹೊರಳಹಳ್ಳಿ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಓದಿ – ನಟ ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ

Share This Article
Leave a comment