ಮುಸ್ಲಿಮರ ಓಲೈಕೆ ಬಿಡಿ : ಗೃಹ ಸಚಿವ ಅಮಿತ್ ಶಾ

Team Newsnap
1 Min Read
Leave the favor of Muslims: Home Minister Amit Shah ಮುಸ್ಲಿಮರ ಓಲೈಕೆ ಬಿಡಿ : ಗೃಹ ಸಚಿವ ಅಮಿತ್ ಶಾ

ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ.

ಚಾಮರಾಜನಗರ: ಮುಸ್ಲಿಮರಿಗೆ ಮತ್ತೇ ಮೀಸಲಾತಿ ಕೊಡುವ ಬಗ್ಗೆ ನೀವು ಮಾತನಾಡಿದ್ದೀರಿ. ಹಾಗಿದ್ದರೆ ಯಾರ ಮೀಸಲಾತಿ ಕಡಿಮೆ ಮಾಡಿ ಅವರಿಗೆ ಕೊಡುತ್ತೀರಿ? ಜನರಿಗೆ ಉತ್ತರ ಕೊಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಡಿದ ಅವರು, ಕಾಂಗ್ರೆಸ್ ಈಗಲೂ ಮುಸ್ಲಿಮರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಶೇ. 4ರ ಮೀಸಲಾತಿ ಕೊಟ್ಟಿತ್ತು. ಬಿಜೆಪಿ ಅದನ್ನು ತೆಗೆದು ಹಾಕಿದೆ. ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.

ಅದಕ್ಕಾಗಿ ಒಕ್ಕಲಿಗರು ಅಥವಾ ಲಿಂಗಾಯತರದ್ದು ಕಡಿಮೆ ಮಾಡುತ್ತೀರಾ? ಎಸ್‍ಸಿ, ಎಸ್‍ಟಿ ಮೀಸಲಾತಿ ಕಡಿಮೆ ಮಾಡುತ್ತೀರಾ? ಈ ತುಷ್ಟೀಕರಣ ರಾಜನೀತಿಯನ್ನ ಮೊದಲು ಕಿತ್ತು ಹಾಕಿ. ಅಭಿವೃದ್ಧಿ ರಾಜನೀತಿಯನ್ನು ತನ್ನಿ ಎಂದು ಅವರು ಹೇಳಿದರು.ನಾಡಿದ್ದು ಮಂಡ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯ‌ ಆಗಮನ : ಬಿಜೆಪಿ ಪರ ರೋಡ್‌ ಶೋ

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸಲಿದ್ದು, ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

Share This Article
Leave a comment