ಮೈಸೂರಿನ ರಾಮಕೃಷ್ಣ ನಗರದ ವಕೀಲೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜರುಗಿದೆ. ಚಂದ್ರಕಲಾ (32) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.
ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.
ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬ ವ್ಯಕ್ತಿಯನ್ನು 2019 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆರು ತಿಂಗಳ ಒಂದು ಮಗು ಕೂಡ ಇತ್ತು.
ಮೃತ ಚಂದ್ರಕಲಾ ಪತಿ ಪ್ರದೀಪ್ ಆಕೆಯ ಪೋಷಕರಿಗೆ ಇಂದು ಬೆಳಗಿನ ಜಾವ ಕರೆ ಮಾಡಿ ಆಸ್ಪತ್ರೆ ಬಳಿ ಬರುವಂತೆ ತಿಳಿಸಿದರು.
ವರದಕ್ಷಿಣೆ ದಾಹಕ್ಕೆ ತಮ್ಮ ಮಗಳು ಬಲಿಯಾಗಿದ್ದಾಳೆ. ಚಂದ್ರಕಲಾ ಸಾವಿಗೆ ಆಕೆಯ ಗಂಡ ಅತ್ತೆ ಮಾವ ಕಾರಣ ಎಂದು ಪೋಷಕರು ಕುವೆಂಪು ನಗರ ಪೋಲಿಸರಿಗೆ ದೂರು ನೀಡಿದ್ದಾರೆ.
ಠಾಣೆ ಇನ್ಸ್ ಪೆಕ್ಟರ್ ಚಂದ್ರಕಲಾ ಗಂಡ – ಮಾವನನ್ನು ವಶ ಪಡೆದಿದ್ದಾರೆ ಅತ್ತೆ ಪರಾರಿಯಾಗಿದ್ದಾಳೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ