December 27, 2024

Newsnap Kannada

The World at your finger tips!

car1

ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಮೂವರ ಬಂಧನ – ಕುಡಿದ ಮತ್ತಿನಲ್ಲಿ ಮಾಡಿದ ದುಷ್ಕೃತ್ಯ

Spread the love

ಬೊಮ್ಮನಹಳ್ಳಿ ‌ಶಾಸಕ ಸತೀಶ್ ರೆಡ್ಡಿಗೆ ಸೇರಿದ ಎರಡು ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೋಲಿಸರು ಬಂಧಿಸಿದ್ದಾರೆ. ನವೀನ್ ಕಾಳಪ್ಪ , ಸಾಗರ್ ಹಾಗೂ ಶ್ರೀ ಧರ್ ಗೌಡ ಅವರುಗಳೇ ಬಂಧಿತರು.

ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದ ವೇಳೆ ಇಬ್ಬರು ಆರೋಪಿಗಳಿಗೆ ಸುಟ್ಟ ಗಾಯಳಾಗಿವೆ. ಕೃತ್ಯಕ್ಕೆ ಬಳಕೆ ಮಾಡಿದ ವಾಹನವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಹೊಂಗಸಂದ್ರ ಓಣಿಯಲ್ಲಿ ಅಡಗಿದ್ದ ಈ ಆರೋಪಿಗಳು ಕುಡಿದ ಮತ್ತಿನಲ್ಲಿ ಈ ದುಷ್ಕೃತ್ಯ ಮಾಡಿದ್ದಾರೆ. ಆದರೆ ನಿರ್ದಿಷ್ಟ ಕಾರಣ ಇಲ್ಲ ಎಂದು ಪೋಲಿಸರ ತನಿಖೆಯಿಂದ ಗೊತ್ತಾಗಿದೆ. ‌

ಆಗ್ನೇಯ ವಿಭಾಗದ ಪೋಲಿಸರು ಈ ದುಷ್ಕೃತ್ಯ ಎಸಗಿದವರನ್ನು ಬಂಧಿಸುವ ಮುನ್ನ ಹಲವಾರು‌ ಸಿಸಿಟಿವಿ ಗಳನ್ನು ಪರಿಶೀಲನೆ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!