December 19, 2024

Newsnap Kannada

The World at your finger tips!

WhatsApp Image 2022 06 23 at 12.05.05 PM

Laughing gas consumption by Telangana Government Hospital #thenewsnap #latestnews #laughing_gas #government_hospital #telangana #kannada_news

ತೆಲಂಗಾಣ ಸರ್ಕಾರಿ ಆಸ್ಪತ್ರೆಯಿಂದ ‘ಪ್ರಸವ ವೇದನೆ’ ತಡೆಗೆ ಲಾಫಿಂಗ್ ಗ್ಯಾಸ್ ಬಳಕೆ

Spread the love

ತೆಲಂಗಾಣದ ಸರ್ಕಾರಿ ಆಸ್ಪತ್ರೆಯಲ್ಲಿ ‘ಪ್ರಸವ ವೇದನೆ’ ತಡೆಗೆ ಲಾಫಿಂಗ್ ಗ್ಯಾಸ್ ಬಳಕೆ ಮಾಡುವ ಮೂಲಕ ಗರ್ಭಿಣಿಯರಿಗೆ ಒಂದಷ್ಟು ರಿಲೀಫ್ ನೀಡುತ್ತಿದೆ.ಕಿಂಗ್ ಕೋಟಿ ಜಿಲ್ಲಾಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಯೋಗ ಮಾಡಲಾಗುತ್ತಿದ್ದು ಅದರಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ –ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಮರಕ್ಕೆ ಡಿಕ್ಕಿಯಾದ ವ್ಯಾನ್ 10 ಯಾತ್ರಿಕರ ಸಾವು

ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಲಾಫಿಂಗ್ ಗ್ಯಾಸ್ ಅಥವಾ Entonox (ನೈಟ್ರಸ್ ಆಕ್ಸೈಡ್ ಮತ್ತು ಆಕ್ಸಿಜನ್ ಮಿಶ್ರಣ) ನೀಡಲಾಗುತ್ತಿದ್ದು, ಇದರಿಂದಾಗಿ ಗರ್ಭಿಣಿಯರಿಗೆ ಕೊಂಚ ರಿಲೀಫ್ ಸಿಗುತ್ತದೆ ಎನ್ನಲಾಗಿದೆ. ಲಾಫಿಂಗ್ ಗ್ಯಾಸ್ ಕುರಿತಂತೆ ಮಾತನಾಡಿರುವ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾಕ್ಟರ್ ಜಲಜಾ ವೆರೋನಿಕಾ, ಯಾವ ಗರ್ಭಿಣಿ ಮಹಿಳೆಗೆ ಅತೀವ ವೇದನೆ ಇರುತ್ತದೋ ಅಂತವರಿಗೆ ಹೈದರಾಬಾದಿನ ಈ ಆಸ್ಪತ್ರೆಯಲ್ಲಿ ಲಾಫಿಂಗ್ ಗ್ಯಾಸ್ ನೀಡುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿಯರು ಆಕ್ಸಿಜನ್ ಮತ್ತು ಲಾಫಿಂಗ್ ಗ್ಯಾಸ್ ಮಿಶ್ರಣವಾದ ಇದನ್ನು ಸೇವಿಸಿದರೆ ಅವರಿಗೆ ವೇದನೆ ಕಡಿಮೆಯಾಗುತ್ತದೆ. ಈಗಾಗಲೇ 13ಕ್ಕೂ ಅಧಿಕ ಗರ್ಭಿಣಿ ಮಹಿಳೆಯರ ಮೇಲೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ಮೇ 12 ರಂದು ಈ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಬಳಸಲಾಯಿತು. ಅಂದಿನಿಂದ ಇಲ್ಲಿಯವರೆಗೆ 13 ಗರ್ಭಿಣಿಯರು ಆಸ್ಪತ್ರೆಯಲ್ಲಿ ಹೆರಿಗೆಯ ಸಮಯದಲ್ಲಿ ಸೂತ್ರವನ್ನು ಬಳಸಿದ್ದಾರೆ. ಇದು ಉತ್ತಮ ಫಲಿತಾಂಶ ನೀಡಿದೆ. ಇದಲ್ಲದೆ, ರಾಜ್ಯಾದ್ಯಂತ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಯೋಜಿಸುತ್ತಿದೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!