December 23, 2024

Newsnap Kannada

The World at your finger tips!

crime

1 ಲಕ್ಷ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದ ಲೇಡಿ PSI ಬೇಬಿ ಓಲೇಕಾರ್​​ ಬಂಧನ ​

Spread the love

ಜಮೀನು ವ್ಯಾಜ್ಯ ಪರಿಹಾರಕ್ಕಾಗಿ ಲೇಡಿ PSI ಬೇಬಿ ಓಲೇಕಾರ್ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಬೆಂಗಳೂರಿನಲ್ಲಿ ಗುರುವಾರ ACB ಬಲೆಗೆ ಬಿದ್ದಿದ್ದಾರೆ, ಅವರನ್ನು ಕೂಡಲೇ ಬಂಧಿಸಲಾಗಿದೆ.

ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ಪಿಎಸ್​ಐ ಬೇಬಿ ಓಲೇಕರ್​​​​​​ ಗಿರೀಶ್​​ ಎಂಬುವರ ಬಳಿ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

WhatsApp Image 2022 07 07 at 4.12.51 PM

ಹೊರಮಾವು ಸಮೀಪ ಇರೋ ಜಮೀನು ಕೇಸ್​ ಸಂಬಂಧ ಲಂಚ ಕೇಳಿದ್ದರು.

ಗಿರೀಶ್​​ ಎಂಬುವರಿಂದ ಲಂಚ ಪಡೆಯುತ್ತಿರುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಪಿಎಸ್​ಐ ಬೇಬಿ ಓಲೇಕರ್​ ಅವರನ್ನು ಬಂಧಿಸಲಾಗಿದೆ. ಇದನ್ನು ಓದಿ – ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದೇ ರಾಜೀನಾಮೆ ನೀಡಲು ಸಮ್ಮತಿ

ಈ ಹಿಂದೆಯೂ ಸಸ್ಪೆಂಡ್ ಆಗಿದ್ದ ಬೇಬಿ :

2013 ರ ಜುಲೈ ನಲ್ಲಿ ರಾಯಚೂರಿನ ಒಬ್ಬ ವ್ಯಕ್ತಿ ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿದ್ದನು ಆತನನ್ನು ಠಾಣೆಗೆ ಎಳೆದು ತಂದು ಮನಸೋ ಇಚ್ಛೆ ಥಳಿಸಿದ ಕಾರಣಕ್ಕೆ ಇದೇ PSI ಬೇಬಿ ಓಲೇಕಾರ್ ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡಲಾಗಿದ್ದನ್ನು ಸ್ಮರಿಸಬಹುದು,

Copyright © All rights reserved Newsnap | Newsever by AF themes.
error: Content is protected !!