ಕರಾವಳಿಯಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ.
ಮಂಗಳೂರಲ್ಲಿ ಈ ಮೊದಲೇ ಸೆಪ್ಟೆಂಬರ್ ೨೦ರವರೆಗೆ ರೆಡ್ ಆಲರ್ಟ್ ನ್ನು ಘೋಷಿಸಲಾಗಿದೆ. ಇಂದು ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕಾರ್ಮಿಕರು ಮರಳಿ ಕೆಲಸಕ್ಕೆ ಮರಳಿದ್ದರು.
ಮಂಗಳೂರಿನ ಅಂತೋನಿ ಚರ್ಚ್ ಬಳಿ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ, ಮಳೆಯಿಂದ ಆಕಸ್ಮಿಕವಾಗಿ ತಡಗೋಡೆ ಕುಸಿದು ಮೃತಪಟ್ಟ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತವಾದ ಅಗ್ನಿ ಶಾಮಕದಳದವರು ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು