ಐಪಿಎಲ್ 20-20ಯ 44ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್‌ಗಳ ಅಮೋಘ ವಿಜಯ ಸಾಧಿಸಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ KXIPತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಆರಂಭಿಕ ಆಟಗಾರರಾಗಿ ಎಸ್. ಗಿಲ್ ಹಾಗೂ ಎನ್. ರಾಣಾ ಫೀಲ್ಡಿಗಿಳಿದರು. ಗಿಲ್ 45 ಎಸೆತಗಳಿಗೆ 57 ರನ್ ಗಳಿಸಿದರೆ ರಾಣಾ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ನಂತರ ಬಂದ ಇ. ಮಾರ್ಗನ್ 25 ಎಸೆತಗಳಿಗೆ 40 ರನ್ ಗಳಿಸಿದರೂ ತಂಡ ಸೋಲಿನ ಹಾದಿ ತುಳಿಯಬೇಕಾಯಿತು. ಪಂಜಾಬ್ ತಂಡದ ಬೌಲರ್‌ಗಳಾದ ಶಮಿ (3ವಿಕೆಟ್), ಜೋರ್ಡನ್ (2 ವಿಕೆಟ್) ಹಾಗೂ ಬಿಷ್ಣೋಯಿ (2 ವಿಕೆಟ್) ಅವರ ಬೌಲಿಂಗ್ ಕೆಕೆಆರ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿತು. ಕೆಕೆಆರ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ಕೆಕೆಆರ್ ತಂಡ ನೀಡಿದ ಗುರಿಗೆ ಪ್ರತಿಯಾಗಿ ಮೈದಾನಕ್ಕೆ ಪಂಜಾಬ್ ತಂಡದ ಕೆ.ಎಲ್. ರಾಹುಲ್ ಮತ್ತು ಎಂ. ಸಿಂಗ್ ಮೈದಾನಕ್ಕೆ ಬಂದರು. ರಾಹುಲ್ 25 ಎಸೆತಗಳಿಗೆ 28 ರನ್ ಗಳಿಸಿ ವರುಣ್ ಚಕ್ರವರ್ತಿಯವರ ಬೌಲಿಂಗ್‌ಗೆ ಔಟಾದರು. ನಂತರದಲ್ಲಿ ಜೊತೆಯಾಟ ಆಡಿದ ಸಿಂಗ್ ಹಾಗೂ ಗೇಲ್ ಅವರ ಆಟ ತಮನಡವನ್ನು ಗೆಲ್ಲಿಸಿತು. ಗೇಲ್ 29 ಎಸೆತಗಳಿಗೆ 51 ರನ್ ಹಾಗೂ ಸಿಂಗ್ 56 ಬಾಲ್‌ಗಳಿಗೆ 66ರನ್ ಗಳಿಸಿ ತಂಡ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪಂಜಾಬ್ ತಂಡ 18.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ