ಐಪಿಎಲ್ 20-20ಯ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರೋಚಕ ಗೆಲುವು ಸಾಧಿಸಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಪಂದ್ಯದಲ್ಲಿ ಮುಗ್ಗರಿಸಿತು.
ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಫೀಲ್ಡಿಗಿಳಿದ ಆರೋನಾ ಫಿಂಚ್ ಹಾಗೂ ದೇವದತ್ ಪಡಿಕಲ್ ಆಟದಲ್ಲಿ ಕಳೆದ ಬಾರಿಯ ಮ್ಯಾಜಿಕ್ ಇರಲಿಲ್ಲ. ಫಿಂಚ್ 18 ಎಸೆತಗಳಲ್ಲಿ 29 ರನ್ ಗಳಿಕೆ ಮಾಡಿದರೆ, ಪಡಿಕ್ಕಲ್ 12 ಎಸೆತಗಳಿಗೆ 18 ರನ್ ಗಳಿಸಿದರು. ಪಡಿಕ್ಕಲ್ ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ 39 ಬಾಲ್‌ಗಳಿಗೆ 48 ರನ್ ಗಳಿಸಿ ಅರ್ಧ ಶತಕದ ಹೊಸ್ತಿಲಲ್ಲಿ ಔಟಾದರು. ನಿರೀಕ್ಷಿತ ಆಟಗಾರ ಎಬಿ ಡಿ ವೀಲಿಯರ್ಸ್ 2 ರನ್‌ಗಳಿಗೆ ಮಹಮದ್ ಶಮಿ ಅವರ ಬೌಲಿಂಗ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಸಿ. ಮೊರೀಸ್ 8 ಎಸೆತಗಳಲ್ಲಿ 25 ರನ್‌ಗಳ ಮಿಂಚಿನಾಟ ಆಡಿದರಾದರೂ ತಂಡ ಗೆಲ್ಲುವಲ್ಲಿ ಅಸಫಲವಾಯಿತು. ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟುವ ನಿಟ್ಟಿನಲ್ಲಿ ಪಂಜಾಬ್ ತಂಡದಿಂದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರು ಆರಂಭಿಕ ಬ್ಯಾಟ್ಸ್‌ಮನ್ ಗಳಾಗಿ ಮೈದಾನಕ್ಕಿಳಿದರು. ರಾಹುಲ್ ಹಾಗೂ ಅಗರ್ವಾಲ್ ಅವರ ಬ್ಯಾಟಿಂಗ್‌ಗೆ ಆರ್‌ಸಿಬಿ ಬೌಲರ್‌ಗಳು ಬಸವಳಿದು ಹೋದರು. ಅಗರ್ವಾಲ್ 25 ಎಸೆತಗಳಿಗೆ 45 ರನ್ ಗಳಿಕೆ ಮಾಡಿ ಔಟಾದರು. ರಾಹುಲ್ 49 ಎಸೆತಗಳಿಗೆ 61 ರನ್ ಹಾಗೂ ಕ್ರಿಸ್ ಗೇಲ್ 45 ಎಸೆತಗಳಿಗೆ 53 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಕಡೆಯ ಕ್ಷಣದಲ್ಲಿ ಗೇಲ್ ರನ್‌ಔಟ್ ಆದುದರಿಂದ ಪ್ರೇಕ್ಷಕರಲ್ಲಿ ಕೆಲ ಕ್ಷಣಗಳ ಗೊಂದಲವುಂಟಾಯಿತು. ಪಂಜಾಬ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಕೆ ಮಾಡಿ ಪಂದ್ಯದಲ್ಲಿ ಜಯಮಾಲೆಯನ್ನು ತನ್ನದಾಗಿಸಿಕೊಂಡಿತು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು