ನಾನು ಸತ್ಯವಾಗಿಯೂ ಹೇಳುತ್ತೇನೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿನೇ ಕಾರಣ. ಇವನು ವೆಸ್ಟೆಂಡ್ ಗಿರಾಕಿ. ಅಲ್ಲಿಂದಲೇ ಆಡಳಿತ ಮಾಡಿದ.
ವಿಧಾನ ಸೌಧದಲ್ಲಿ ಕುಳಿತ ಆಡಳಿತ ಮಾಡಲೇ ಇಲ್ಲ. ಇತ್ತ ಶಾಸಕರ ಕೈಗೂ ಸಿಗಲಿಲ್ಲ. ಕೊನೆಗೆ ಸರ್ಕಾರ ಬಿದ್ದು ಹೋಯಿತು.
ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಸುಖಾಸುಮ್ಮನೇ ನನ್ನ ಸರ್ಕಾರದ ಪತನಕ್ಕೆ ಸಿದ್ಧರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಅಪಪ್ರಚಾರ ಮಾಡುತ್ತಾನೆ. ನಾನು ಹೇಗೆ ಕಾರಣ ವಿವರಣೆ ನೀಡಲಿ ಎಂದರು.
ಸಮ್ಮಿಶ್ರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿನೇ ನೇರ ಹೊಣೆ. ಇವನು ವೆಸ್ಟ್ ಎಂಡ್ ಗಿರಾಕಿ. ಅಲ್ಲಿಂದಲೇ ಕುಳಿತು ಆಡಳಿತ ಮಾಡಿದ. ಶಾಸಕರ ಸಮಸ್ಯೆಗಳನ್ನು ಕೇಳಲಿಲ್ಲ. ಕೈಗೂ ಸಿಗಲಿಲ್ಲ. ಅದಕ್ಕೆ ಅಧಿಕಾರ ಕಳೆದುಕೊಂಡ ಎಂದು ಹೇಳಿದರು.
ಇವರು ಸದಾ ಅಧಿಕಾರದಲ್ಲಿ ಇರಬೇಕು. ನಮ್ಮ ಜೊತೆ ಆಟ ಮುಗಿತು. ಈಗ ಬಿಜೆಪಿ ಜೊತೆಗೆ ಆಟ ಶುರು ಮಾಡಿದ್ದಾರೆ. ಇವರಿಗೆ ಅಧಿಕಾರ ಇಲ್ಲ ಅಂದ್ರೆ ಆಗೋಲ್ಲಾ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಹೊಟ್ಟೆ ಕಿಚ್ಚು – ಸೋಲಿಸಿದರು
ನಾನು ಮುಖ್ಯಮಂತ್ರಿ ಬಡವರ ಪರವಾಗಿ ಸಮರ್ಥ ಆಡಳಿತವನ್ನು ನೀಡಿದೆ. ನನ್ನ ಐದು ವರ್ಷ ಅವಧಿಯಲ್ಲಿ ಆಡಳಿತ ಲೋಪವೇ ಇರಲಿಲ್ಲ. ಬಡವರಿಗೆ ಉಚಿತ ಅಕ್ಕಿ ಕೊಟ್ಟೆ ಅದು ತಪ್ಪಾ? ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲರೂ ಒಂದಾಗಿ ಸೋಲಿಸಿದರು. ನಾನು ಏನು ತಪ್ಪು ಮಾಡಿದ್ದೆ. ಜನರು ನಮ್ಮನ್ನು ಯಾಕೆ ಸೋಲಿಸಿದರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ ಎಂದರು.
ನನ್ನ ಇಲ್ಲಿನ ಜನ ಸೋಲಿಸಿದರು. ನಾನು ಬಾದಾಮಿಯಲ್ಲೂ ಸೋತಿದ್ದರೆ ನನ್ನ ರಾಜಕೀಯ ಭವಿಷ್ಯ ಮುಗಿದು ಹೋಗುತ್ತಿತ್ತು. ನಾನು ಗೆದ್ದರೆ ಮತ್ತೊಂದು ಬಾರಿ ಮುಖ್ಯ ಮಂತ್ರಿ ಆಗುತ್ತೇನೆ ಎನ್ನುವ ಕಾರಣಕ್ಕಾಗಿ ಸೋಲಿಸಿದರು.
ಅದು ಹೊಟ್ಟೆ ಕಿಚ್ಚಿನ ಪರಮಾವಧಿ. ನನ್ನ ಪಕ್ಷದವರೂ ಕೆಲವರು ಸೇರಿ ತಂತ್ರ ಮಾಡಿದರು ಎಂದು ಸಿದ್ದರಾಮಯ್ಯ ತಮ್ಮ ಸೋಲಿನ ವಿಶ್ಲೇಷಣೆ ಮಾಡಿದರು.
ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ :
ನಾನು ಮುಂದಿನ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಇನ್ನು ಆರು ತಿಂಗಳ ನಂತರ ನಿರ್ಧಾರ ಮಾಡುತ್ತೇನೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದೂ ಕೂಡ ನಿರ್ಧಾರ ಆಗಿಲ್ಲ. ಆದರೆ ಒಂದು ಆಸೆ ಇತ್ತು. ಕಳೆದ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದರೆ ನಿವೃತ್ತಿ ಘೋಷಣೆ ಮಾಡುವ ನಿಲುವು ತಳೆಯುತ್ತಿದ್ದೆ. ಏಕೆಂದರೆ ಆ ಕ್ಷೇತ್ರದ ಜನ ಸದಾ ನನಗೆ ಜನ್ಮ ನೀಡಿದ್ದಾರೆ. ಹೀಗಾಗಿ ನಂಗೆ ಇಲ್ಲಿ ಗೆಲ್ಲುವ ಆಸೆ ಇತ್ತು ಎಂದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ