December 27, 2024

Newsnap Kannada

The World at your finger tips!

kumar bom

Bommai Remote Control CM -HDK -HDK #thenewsnap #HDK #latestnews #karnataka_politics #BJP #JDS #kannada_news

ಕಲಬುರಗಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ಕುಮಾರಸ್ವಾಮಿ ಒಲವು – ಸಿಎಂ ಬೊಮ್ಮಾಯಿ

Spread the love

ಕಲಬುರಗಿ ಮಾಹಾ ನಗರ ಪಾಲಿಕೆಯಲ್ಲಿ ಮೇಯರ್ ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆ ನಿನ್ನೆ ಇನ್ನೂ ವಿವರವಾಗಿ ಚರ್ಚೆ ಮಾಡಿಲ್ಲ. ಆದರೆ ಒಟ್ಟಾಗಿ ಹೋಗೋಣವೆಂದು ಹೇಳಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಹೇಳುವುದಾಗಿ ಹೆಚ್‍ಡಿಕೆ ಹೇಳಿದ್ದಾರೆ ಎಂದರು.

ಪಾಲಿಕೆಯಲ್ಲಿ ಒಂದಾಗಿ ಕೆಲಸ ಮಾಡಲು ಕುಮಾರಸ್ವಾಮಿ ಒಲವು ತೋರಿಸಿದ್ದಾರೆ. ಬಹುತೇಕ ಬಿಜೆಪಿ-ಜೆಡಿಎಸ್ ಕಲಬುರಗಿ ಪಾಲಿಕೆಯಲ್ಲಿ ಸೇರಿ ಬಹುಮತ ಮಾಡ್ತೇವೆ ಎಂದು ಹೇಳುವ ಮೂಲಕ ಮೈತ್ರಿ ಖಚಿತ ಎಂದು ಸ್ಪಷ್ಟವಾಗಿ ಹೇಳಿದರು.

ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ :

ಇಂದು ನಾನು ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ನಾಲ್ಕಾರು ಜನ ಕೇಂದ್ರ ಸಚಿವರ ಭೇಟಿ ಮಾಡುತ್ತೇನೆ. ಗಡ್ಕರಿ ಭೇಟಿ, ಹಣಕಾಸು ಸಚಿವರ ಭೇಟಿ ಮಾಡಿ ಮಾತುಕತೆ, ರಾಜ್ಯದ ಯೋಜನೆಗಳ ಬಗ್ಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ನಿಫಾ ವೈರಸ್‌ ಬಗ್ಗೆ ಹೆಚ್ಚಿನ ನಿಗಾ :

ಕೇರಳದಲ್ಲಿ ನಿಫಾ ವೈರಸ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾವು ಕೇರಳ ಗಡಿ ಸೀಲ್ ಮಾಡಿದಾಗ ಲಸಿಕೆ, ಟೆಸ್ಟಿಂಗ್ ಗೆ ಕ್ರಮ ಕೈಗೊಂಡಿದ್ದೆವು. ಈಗ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ನಿಫಾ ವೈರಸ್ ಬಗ್ಗೆ ತಜ್ಞರಿಂದ ಸಂಪೂರ್ಣ ಮಾಹಿತಿಯನ್ನು ಕೇಳಿದ್ದೇನೆ. ನಿಫಾ ವೈರಸ್ ಹೇಗೆ ಹಬ್ಬುತ್ತೆ, ಏನೆಲ್ಲ ಮುಂಜಾಗ್ರತೆ ಕ್ರಮ ತಗೋಬೇಕು ಅಂತ ಸಲಹೆ ಕೇಳಿದ್ದೇನೆ. ನಿಫಾ ವೈರಸ್ ಬಗ್ಗೆ ನಿಗಾ ವಹಿಸಿದ್ದೇವೆ. ವೈರಸ್ ತಡೆಗೆ ಇನ್ನಷ್ಟು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!