December 23, 2024

Newsnap Kannada

The World at your finger tips!

BMTC

KSRTC ಹಾಗೂ BMTC ಬಸ್ ಸಂಚಾರದಲ್ಲಿ ಮೇ 5 ರಿಂದ 13 ರವರೆಗೆ ವ್ಯತ್ಯಯ ಸಾಧ್ಯತೆ

Spread the love

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಆಯೋಗ ಸಕಲ ಸಿದ್ದತೆ ನಡೆಸಿದ್ದು, ಸುಮಾರು 10 ಸಾವಿರ ಬಸ್ ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದೆ. ಮೇ. 5 ರಿಂದ 13 ರವರೆಗೆ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

KSRTC , price , hike

ಈ ಹಿನ್ನೆಲೆ ಸಾರ್ವಜನಿಕರಿಗೆ ಬಸ್ ಸಂಚಾರದಲ್ಲಿ ಮೇ 5 ರಿಂದ 13 ರವರೆಗೆ ವ್ಯತ್ಯಯವಾಗುವ ಸಾಧ್ಯತೆ ಇದೆ. BMTC ಹಾಗೂ KSRTC ಬಸ್ಗಳ ಜತೆಗೆ RTO ವಾಹನಗಳನ್ನೂ ಸಹ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯಲು ಮತ್ತು ಚುನಾವಣಾ ಪರಿಕರಗಳನ್ನು ರವಾನಿಸಲು ಸರ್ಕಾರಿ ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೇ 5ರಿಂದ 13ರವರೆಗೆ ಚುನಾವಣಾ ಕೆಲಸಕ್ಕೆ ಬಸ್ ಗಳ ಅವಶ್ಯಕತೆಯಿದ್ದು, ಹೀಗಾಗಿ KSRTC ಹಾಗೂ BMTC ಬಸ್ಸುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು. ಈ ಹಿನ್ನೆಲೆ ಸಾರ್ವಜನಿಕರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ತ್ರಿಕೋನ ಸ್ಪರ್ಧೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ

ರಾಜ್ಯದಲ್ಲಿ ಮೇ 10 ರಂದು ವಿಧಾನಸಭೆ ಚುನಾವಣೆ ರಣಕಹಳೆ ಮೊಳಗಿದೆ, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ಮೀನಾ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ರಾಜ್ಯದಲ್ಲಿ ಈವರೆಗೆ 265 ಕೋಟಿ ಹಣ ಜಪ್ತಿ ಮಾಡಲಾಗಿದೆ . ಗುಂಪು ಘರ್ಷಣೆ ಸಂಬಂಧ 15 ಎಫ್‌ಐಆರ್ ದಾಖಲಾಗಿದೆ.

ಮೇ.10ರಂದು ರಾಜ್ಯ ದ 224 ಕ್ಷೇತ್ರಗಳಲಿ ಮತದಾನ ನಡೆಸಲಿದೆ.ಕರ್ನಾಟಕದಲ್ಲಿರುವವ ರಾಜ್ಯದಲ್ಲಿ ಒಟ್ಟು 5,30,85,566 ಮತದಾರರರು ಇದ್ದಾರೆ.

  • ಪುರುಷ – 2,66,82,156
  • ಮಹಿಳಾ – 2,63,98,483
  • ಹೊಸ ಮತದಾರ – 16,04,285
  • ರಾಜ್ಯದಲ್ಲಿ ಒಟ್ಟು 5,30,85,566

2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.

  • 58,545 ಪೋಲಿಂಗ್ ಸ್ಟೇಷನ್
  • 1,15,709 ಇವಿಎಂ
  • 89379 ವಿವಿಪ್ಯಾಟ್ ಯಂತ್ರ
  • 47,488 ಯೋಧರಿಗೆ ಅಂಚೆ ಮತಪತ್ರ
  • 80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನ
  • 19279 ವಿಕಲ ಚೇತನರು
  • 13771 ಅಗತ್ಯ ಸೇವೆ ಒದಗಿಸುವವರು

Copyright © All rights reserved Newsnap | Newsever by AF themes.
error: Content is protected !!