ಚಿರತೆ ಸೆರೆಯಾಗಿಲ್ಲ : ಲಾಸ್ ತಪ್ಪಿಸಲು KRS ಬೃಂದಾವನ 25 ದಿನಗಳ ನಂತರ ಓಪನ್

Team Newsnap
1 Min Read

ಚಿರತೆ ಸೆರೆ ಸಿಕ್ಕಿಲ್ಲ. ಆದರೂ ಆತಂಕದಲ್ಲೇ ಸಂಪೂರ್ಣ ಬಂದ್‌ ಆಗಿದ್ದ ಮಂಡ್ಯದ ಕೆ ಆರ್ ‌ಎಸ್‌ ಬೃಂದಾವನ 25 ದಿನದ ಬಳಿಕ ಮತ್ತೆ ಪ್ರವಾಸಿಗರಿಗಾಗಿ ಪ್ರವೇಶ ನೀಡಲು ಅನುಮತಿ ನೀಡಲಾಗಿದೆ.

25 ದಿನಗಳಿಂದ KRS ಮುಚ್ಚಿದ್ದರಿಂದ ಸರ್ಕಾರಕ್ಕೆ ಸುಮಾರು 80 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಟಿಕೆಟ್ ಹಾಗೂ ವಾಹನ ಪಾರ್ಕಿಂಗ್‌ನಿಂದ ಬರುತ್ತಿದ್ದ ಹಣ, ನಿರಂತರವಾಗಿ ಬೃಂದಾವನ ಬಂದ್ ಆಗಿದ್ದರಿಂದ ಸರ್ಕಾರಕ್ಕೆ ನಷ್ಟವಾಗಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೃಂದಾವನ 25 ದಿನ ಮುಚ್ಚಿತ್ತು.

ಚಿರತೆ ಕಾಣಿಸಿಕೊಂಡ ತಕ್ಷಣವೇ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಲಿಲ್ಲ. ಎರಡು ಬೋನ್ ಇಟ್ಟು ಚಿರತೆ ತಾನಾಗಿಯೇ ಸೆರೆಯಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದ್ದರು. ಪದೇ ಪದೇ ಚಿರತೆ ಕಾಣಿಸಿಕೊಳ್ಳಲು ಆರಂಭಿಸಿದ ಬಳಿಕ 8 ಬೋನ್ ಇಟ್ಟಿದ್ಥರು. ಆರಂಭದಲ್ಲಿ ಕಾಟಾಚಾರಕ್ಕೆ ಕೂಂಬಿಂಗ್ ನಡೆಸಿ ಕೈಚಲ್ಲಿದ್ದರು.
ಆಕ್ರೋಶ ಹೆಚ್ಚಾದ ಬಳಿಕ ಮೂರ್ನಾಲ್ಕು ದಿನದಿಂದ ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ಡ್ಯಾಂ ಹಾಗೂ ಬೃಂದಾವನದ ಸುತ್ತಮುತ್ತ ಪದೇ ಪದೇ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ನಿರಂತರವಾಗಿ ಕಾರ್ಯಾಚರಣೆಯಿಂದಲೂ ಚಿರತೆ ಇನ್ನೂ ಸೆರೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು 8 ಬೋನ್ ಇಟ್ಟು ಬೀದಿ ನಾಯಿ ಕೊಟ್ಟಿದ್ದರು. ಬೋನ್‌ಗೆ ಸೆರೆಯಾಗದಿದ್ದಾಗ ಕೂಂಬಿಂಗ್ ಜೊತೆ ಡ್ರೋಣ್ ಕಾರ್ಯಾಚರಣೆ ನಡೆಸಿದ್ದರು. ಆದರೂ ಚಿರತೆ ಸೆರೆಯಾಗಿಲ್ಲ. ಜಗದೀಶ್ ಚಂದ್ರ ಬೋಸ್ – ಭಾರತದ ಶ್ರೇಷ್ಠ ವಿಜ್ಞಾನಿ (Jagadish Chandra Bose)

ಈಗ ಚಿರತೆ ಸೆರೆ ಸಿಕ್ಕದಿದ್ದರೂ ಬೃಂದಾವನದ ಪ್ರಸಿದ್ಧಿ ಹಾಳಾಗಬಾರದೆಂದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

Share This Article
Leave a comment