ಹಾಸನದಲ್ಲಿ ನಾಪತ್ತೆಯಾಗಿದ್ದ 7ನೇ ತರಗತಿಯ ಕೆ ಆರ್ ಪೇಟೆ ವಿದ್ಯಾರ್ಥಿನಿ ತುಮಕೂರಿನಲ್ಲಿ ಪತ್ತೆ

Team Newsnap
1 Min Read
34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಶಾಲೆಗೆ ಮುಗಿದ ನಂತರ ನಾಪತ್ತೆಯಾಗಿದ್ದ 7ನೇ ತರಗತಿ ಕೆಆರ್ ಪೇಟೆ ವಿದ್ಯಾರ್ಥಿನಿ ನಂದಿತಾ ತುಮಕೂರಿನಲ್ಲಿ ಪತ್ತೆಯಾಗಿದ್ದಾಳೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ನಂದಿತಾ, ಸರ್ಕಾರಿ ಹಾಸ್ಟೆಲ್‍ನಲ್ಲಿದ್ದಳು.

ಕೆ.ಆರ್.ಪೇಟೆ ತಾಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದರು.

ನವೆಂಬರ್ 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣಿಯಾಗಿದ್ದಳು.

ನವೆಂಬರ್ 7ರಂದು ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಹಾಸ್ಟೆಲ್‍ಗೆ ಹೋಗದೆ ನಾಪತ್ತೆಯಾಗಿದ್ದಳು. ಆದರೆ ಶುಕ್ರವಾರ ಸಂಜೆ ಬಾಲಕಿ ನಂದಿತಾ ತುಮಕೂರಿನಲ್ಲಿ ಪತ್ತೆಯಾಗಿದ್ದು, ನುಗ್ಗೇಹಳ್ಳಿ ಪೊಲೀಸರು ಬಾಲಕಿಯನ್ನು ಕರೆತಂದಿದ್ದಾರೆ. 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ – ಸಚಿವ ನಾಗೇಶ್

ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾಕು ಮಗಳು ಹಾಗೂ ವಿದ್ಯಾರ್ಥಿನಿ ಪತ್ತೆಯಾಗಿರುವುದರಿಂದ ಪೋಷಕರು ಹಾಗೂ ಶಿಕ್ಷಕರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

Share This Article
Leave a comment