ಆಕ್ಸಿಜನ್ ದುರಂತ 36 ಕುಟುಂಬಕ್ಕೆ ತಲಾ 1 ಲಕ್ಷ ರು ಪರಿಹಾರ ನೀಡಿದ ಕೆಪಿಸಿಸಿ

Team Newsnap
1 Min Read
Bomb threat to DKshi school: Student mailed to postpone the exam ಡಿಕೆಶಿ ಶಾಲೆಗೆ ಬಾಂಬ್ ಬೆದರಿಕೆ: ಪರೀಕ್ಷೆ ಮುಂದೂಡಲು ವಿದ್ಯಾರ್ಥಿಯೇ ಮೇಲ್ ಮಾಡಿದ್ದ #Thenewsnap #Latestnews #bengaluru #Bomb_Threat #DKS #School #india #mandya_news #mysuru

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಮೃತಪಟ್ಟವರ 36 ಜನರ ಕುಟುಂಬಕ್ಕೂ ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ವಿತರಿಸಲಾಯಿತು.‌

ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ. ಚೆಕ್​ ವಿತರಣೆ ಮಾಡಿದರು.

ಶಿವಕುಮಾರ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸಾಥ್ ಸಾಥ್ ನೀಡಿದ್ದಾರೆ.

ಶಿವಕುಮಾರ್ ನೇತೃತ್ವದ ತಂಡ ಮೊದಲು ಹನೂರು ತಾಲೂಕು ಚನ್ನಿಪುರದದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮೃತ ರಂಗಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿತು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್​ ಇದು ಸಹಜ ಸಾವಲ್ಲ, ಸರ್ಕಾರ ಮಾಡಿದ ಕೊಲೆ. 36 ಮಂದಿ ಸಾವಿಗೆ ಸರ್ಕಾರವೇ ನೇರ ಹೊಣೆ. ಘಟನೆಗೆ ಕಾರಣರಾದವರ ಒಬ್ಬರ ಮೇಲು ಇದುವರೆಗೂ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಬೇಕಿತ್ತು. ಅವರಿಗೆ ಭಯ, ಜನರು ಆಕ್ರೋಶಗೊಂಡಿ ದ್ದಾರೆ. ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಇದೆ. ಯಾವ ಬಿಜೆಪಿ ಸಚಿವನೂ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಗುಡುಗಿದರು.

Share This Article
Leave a comment