ಮುಖ್ಯಮಂತ್ರಿಗಳ ಮುಂದೆಯೇ ಉಸ್ತುವಾರಿ ಸಚಿವರು ಗಂಡಸರು ಯಾರಿದ್ದಾರೆ ಅಂತ ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ವಿರುದ್ಧ ಪರೋಕ್ಷವಾಗಿ ಮತ್ತೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಅವರು, ನಾವು ಜೋರಾಗಿ ಅಧಿಕಾರ ಚಲಾಯಿಸಿದರೆ ಡಿ.ಕೆ.ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಅಂತ ಸಿಎಂ ಹೇಳಿದ್ದಾರೆ. ಇದರಿಂದ ನನಗೂ ಸಹ ಭಯವಾಗುತ್ತಿದೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಮುಂದೆಯೇ ಉಸ್ತುವಾರಿ ಸಚಿವರು ಗಂಡಸರು ಯಾರಿದ್ದಾರೆ ಅಂತ ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು, ನಾನು, ನನ್ನ ತಮ್ಮ ಅನಿತಾ ಕುಮಾರಸ್ಚಾಮಿ ಎಲ್ಲರು ಅವರ ಗಂಡಸ್ತನ ನೋಡಿ ಗಢ, ಗಢ ಅಂತ ನಡುಗುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.
ಇದೀಗ ಪಿಎಸ್‍ಐ ಅಕ್ರಮದಲ್ಲಿ ಸಚಿವರೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರ ತಮ್ಮ ಅನ್ನಲ್ಲ ಅವರ ಕುಟುಂಬಸ್ಥರು ಸಂಬಂಧಿಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ಬಗ್ಗೆ ಸಿಎಂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು.
ನಾನು ಆ ಸಚಿವರ ಬಗ್ಗೆ ಮಾತನಾಡುತ್ತೇನೆ ಅಂತ ನನಗೆ ಕಾಲ್ ಬರುತ್ತಿವೆ. ಅಣ್ಣ ಅವರ ಬಗ್ಗೆ ಮಾತನಾಡಬೇಡಿ ಅವರು ಈ ಬಾರಿ ಸಿಎಂ ಆಗಿ ಬಿಡುತ್ತಾರೆ. ಅವರ ಬಗ್ಗೆ ಮಾತನಾಡಿ ತೊಂದರೆ ಮಾಡಬೇಡಿ ಅಂತ ಯಾರ್ಯಾರೋ ಕಾಲ್ ಮಾಡಿದ್ದರು ಎಂದರು.
ಪಿಎಸ್‍ಐ ನೇಮಕಾತಿ ಅಕ್ರಮದ ಬಗ್ಗೆ ಸಿಎಂ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಮುಂದಾಗಬೇಕು. ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಅಂತ ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಸಿಎಂ ಅವರು ಸಚಿವರ ರಕ್ಷಣೆ ಮಾಡಬಾರದು. ಯಾರೇ ಇರಲಿ. ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ