15-18 ವಯಸ್ಸಿನ ಮಕ್ಕಳಿಗೆ ಇಂದಿನಿಂದ ಕೋವಿಡ್‌ ಲಸಿಕೆ

Team Newsnap
1 Min Read

ಇಂದಿನಿಂದ ದೇಶದಲ್ಲಿ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ.

ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಸರ್ಕಾರದ ಕೋವಿನ್‌ ಪೋರ್ಟಲ್‌ ನಲ್ಲಿ ಈಗಾಗಲೇ 8 ಲಕ್ಷ ಮಕ್ಕಳು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗುವುದು.

ಶಾಲೆಗಳೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗುವುದು.

ಹೆಚ್ಚಿನ ಸಂಖ್ಯೆಯ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಲಸಿಕೆ ಕೇಂದ್ರಗಳಾಗಿಯೂ ಬಳಸಲಾಗುತ್ತಿದೆ.

2007ನೇ ಇಸವಿ ಅಥವಾ ಅದಕ್ಕಿಂತಲೂ ಮೊದಲು ಜನಿಸಿರುವ ಮಕ್ಕಳು ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರ ಮಕ್ಕಳಿಗೆ ನೀಡಲಾಗುವುದು. ಲಸಿಕೆಯ ಡೋಸ್‌ಗಳನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Share This Article
Leave a comment