ಕೊಪ್ಪಳದಲ್ಲಿ 5 ಸಾವಿರ ಕೋಟಿ ರೂ ವೆಚ್ಚದಲ್ಲಿ ಭಾರತದ ಮೊದಲ ಆಟಿಕೆ ತಯಾರಿಕಾ ಘಟಕ

Team Newsnap
3 Min Read

ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ 5 ಕೋಟಿ ರು.ವೆಚ್ಚದಲ್ಲಿ ಆಟಿಕೆ ತಯಾರಿಕಾ ಉದ್ಯಮವೊಂದು ತಲೆ ಎತ್ತಲಿದೆ.
ದೇಶದಲ್ಲೇ ಪ್ರಥಮ ಎನ್ನಬಹುದಾದ ಬೃಹತ್ ಆಟಿಕೆ ಉದ್ಯಮದ ಘಟಕವೊಂದನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ದತೆ ಮಾಡುತ್ತಿವೆ. ಈ ಮೂಲಕ ಉದ್ಯೋಗ ಸೃಷ್ಠಿ ಹಾಗೂ ಸ್ವಾವಲಂಬನೆ ಭಾರತ ಕಟ್ಟುವ ಹೊಸ ಹೆಜ್ಜೆಗಳು ಆರಂಭವಾದಂತಾಗಿವೆ.
ಕಳೆದ ಮಾರ್ಚ ಇಂದ ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಕೊರೋನಾ ಮಾಹಾಮಾರಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಅಧೋಗತಿಯ ಹಂತ ತಲುಪಿದೆ. ಉದ್ಯೋಗ ಕಳೆದು ಕೊಂಡು ಲಕ್ಷಾಂತರ ಜನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಸ್ವ ಸ್ವಾಮರ್ಥದಿಂದ ಕಟ್ಟಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಆತ್ಮ ನಿರ್ಭರತೆಯನ್ನು ಸಾಧಿಸಲು ಹೊಸ ಸಂಕಲ್ಪ ಮಾಡಿ, ಚೀನಾ ದೇಶಕ್ಕೆ ಒಳ ಏಟು ನೀಡಲು ಮುಂದಾಗಿದೆ.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಆಟಿಕೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಚೀನಾದ ವಸ್ತುಗಳ ಮೇಲೆ ಸಾಕಷ್ಟು ಅವಲಂಬಿತವಾಗಿದ್ದವು. ಇಡೀ ಪ್ರಪಂಚಕ್ಕೆ ಕೊರೋನಾ ವೈರಸ್ ಹರಡುವಂತೆ ಮಾಡಿ ವಿಶ್ವವನ್ನು ತಲ್ಲಣಗೊಳಿಸಿದ ಚೀನಾಗೆ ಬುದ್ದಿ ಕಲಿಸುವ ಮೂಲಕ ಪರೋಕ್ಷವಾಗಿ ಆಂತರ್ ಯುದ್ಧ ಆರಂಭಿಸಿದ ಭಾರತ ಈಗ ಸ್ವಾವಲಂಬನೆಯ ಹೆಜ್ಜೆ ಇಡಲು ಆರಂಭಿಸಿದೆ.
ಬೊಂಬೆ ಪಟ್ಟಣ ಎಂದೇ ಖ್ಯಾತಿಯಾಗಿರುವ ಚನ್ನಪಟ್ಟಣದ ಗೊಂಬೆಗಳು ತುಂಬಾ ಫೇಮಸ್. ಸ್ಥಳೀಯವಾಗಿ ಗುಡಿ ಕೈಗಾರಿಕೆ ಮೂಲಕ ಗೊಂಬೆಗಳನ್ನು ತಯಾರಿಕೆ ಮಾಡಿ ಮಾರಾಟ ಮಾಡುವ ಈ ಉದ್ಯಮ ಅನೇಕರಿಗೆ ಉದ್ಯೋಗ ನೀಡಿದೆ. ಇಡೀ ದೇಶಕ್ಕೆ ಸಾಕಾಗುಷ್ಟು ಗೊಂಬೆಗಳನ್ನು ತಯಾರಿಸುವುದು ಚನ್ನಪಟ್ಟಣದಲ್ಲಿ ಅಸಾಧ್ಯದ ಮಾತು. ಆದರೆ ಸ್ಥಳೀಯ ಬೇಡಿಕೆಯನ್ನು ಅಲ್ಲಿನ ಸಣ್ಣ ಪುಟ್ಟ ಉದ್ದಿಮೆಗಳು ಪೂರೈಕೆ ಮಾಡುತ್ತವೆ.

ಕೊಪ್ಪಳದ ಆಟಿಕೆ ಉದ್ಯಮ ವಿವರ


ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಪ್ಪಳದಲ್ಲಿ 5 ಸಾವಿರ ಕೋಟಿ ರು ವೆಚ್ಚದಲ್ಲಿ ಆಟಿಕೆ ಉದ್ಯಮ ಘಟಕ ಆರಂಭಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿವೆ.

  • ಈ ಯೋಜನೆಯ ರೂಪ ರೇಷೆಗಳು ಕೂಡ ಸಿದ್ದವಾಗಿವೆ. ರಾಷ್ಟ್ರೀಯ ಹೆದ್ದಾರಿ 63 ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಹತ್ತಿರದಲ್ಲಿ ಇರುವುದರಿಂದ ಕೊಪ್ಪಳದಲ್ಲೇ ಉದ್ಯಮ
    ಸ್ಥಾಪನೆ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ.
  • ಈ ಯೋಜನೆಗಾಗಿ 5 ಸಾವಿರ ಕೋಟಿ ರು ವೆಚ್ಚ ಮಾಡಲು ನಿರ್ಧಾರ.
  • ಉದ್ಯಮ ಸ್ಥಾಪನೆಯಿಂದಾಗಿ ಅಂದಾಜು 40 ಸಾವಿರ ಜನರಿಗೆ ಉದ್ಯೋಗ ಅವಕಾಶ .
  • ಈ ಉದ್ಯಮಕ್ಕೆ ಚಾಲನೆ ದೊರೆತರೆ ಶೇ. 18 ರಷ್ಟು ಆಟಿಕೆ ಉದ್ಯಮದ ಬೆಳವಣಿಗೆ ಕಾಣುತ್ತದೆ.

* 2023 ರ ವೇಳೆಗೆ ಈ ಉದ್ಯಮದಿಂದ ಅಂದಾಜು 2,300 ಕೋಟಿ ರು ಆದಾಯ ನಿರೀಕ್ಷೆ ಹೊಂದಲಾಗಿದೆ.

ಪ್ರಧಾನ ಮಂತ್ರಿ ಮೋದಿ ಹೇಳಿದ್ದೇನು?


ದೇಶದ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ರೆಡಿಯೋ ಕಾರ್ಯಕ್ರಮದಲ್ಲಿ ಈ ಕುರಿತಂತೆ ವಿವರಣೆ ನೀಡಿ, ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು ಕೇವಲ

7 ಲಕ್ಷ ಕೋಟಿ ರು ಮಾತ್ರ ಆಗಿದೆ. ಇದು ಬಹಳ ಕಡಿಮೆ. ನಾವು ಭಾರತವನ್ನು ಜಾಗತೀಕ ಆಟಿಕೆ ತಯಾರಿಕಾ ಕೇಂದ್ರವನ್ನಾಗಿ ಮಾಡುವ ಸಂಕಲ್ಪ ಮಾಡಬೇಕಿದೆ. ಈ ಕಾರಣಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು. ಸಣ್ಣ ಉದ್ದಿಮೆಗಳಿಗೆ ಬಲ ತುಂಬುವ ಅನಿವಾರ್ಯತೆಯೂ ಇದೆ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಟೀಕೆ

ಪ್ರಧಾನ ಮಂತ್ರಿ ಮೋದಿ ಜೆಇಇ ಮತ್ತು ನೀಟ್ ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಬೇಕು, ಆಟಿಕೆ ವಸ್ತುಗಳ ಬಗ್ಗೆ ಚರ್ಚೆ ಸಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ರಾಹುಲ್ ಮಾಡಿರುವ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡು, ಪ್ರಧಾನಿಗಳು ತಮ್ಮ ಮನ್ ಕಿ ಬಾತ್ ನಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ಕುರಿತಂತೆ ಮಾತನಾಡುತ್ತಾರೆಂದು ವಿದ್ಯಾರ್ಥಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆಟಿಕೆಗಳ ( ಖೇಲೋನಾ ಪೇ ಚರ್ಚ) ಬಗ್ಗೆ ಚರ್ಚೆ ಮಾಡಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

Share This Article
2 Comments