February 24, 2026

Newsnap Kannada

The World at your finger tips!

kolar 1

ಕೋಲಾರ :ಅಕ್ಕ-ತಂಗಿಯನ್ನು ವಿವಾಹವಾಗಿದ್ದ‌ ಉಮಾಪತಿ‌ ಜೈಲು ಸೇರಿದ

Spread the love

ಕೋಲಾರ ಜಿಲ್ಲೆಯಲ್ಲಿ ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಉಮಾಪತಿ ವಿರುದ್ಧ ಈಗ ದೂರು ದಾಖಲಾಗಿದೆ.‌ ಪೊಲೀಸರು ವರನನ್ನು ಬಂಧಿಸಿದ್ದಾರೆ.

ಮೇ.07 ರಂದು ಜಿಲ್ಲೆಯ ಉಮಾಪತಿ ಎಂಬಾತ ಅಕ್ಕ-ತಂಗಿಯನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದ.

ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಉಮಾಪತಿ, ವಧುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಫೋಟೋ ಹೆಚ್ಚು ವೈರಲ್ ಆದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಘಟನೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.

ಬಂಧನಕ್ಕೆ ಕಾರಣ ಏನು ?

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಚಾರಣೆ ನಡೆಸಿದ ಪೊಲೀಸರು, ಇಬ್ಬರು ಸಹೋದರಿಯರಲ್ಲಿ ತಂಗಿಗೆ ಇನ್ನು ಅಪ್ರಾಪ್ತ ವಯಸ್ಸು.
ಈ ಕಾರಣಕ್ಕಾಗಿ ಪೊಲೀಸರು ವರ ಉಮಾಪತಿ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಮನೆಯ ಹೆಣ್ಣು ಮಕ್ಕಳಿಬ್ಬರನ್ನು ಮದುವೆಯಾಗಬೇಕು ಎಂಬ ವಧುವಿನ ತಂದೆ ಬೇಡಿಕೆ ಇಟ್ಟ ಕಾರಣಕ್ಕೆ ವರ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ. ಮದುವೆಯಾಗಿ ಉಮಾಪತಿ ಜೈಲು ಸೇರಿದ.‌ ವಿಚಾರಣೆ ನಡೆದಿದೆ.‌

error: Content is protected !!