ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ ಪ್ರಜಾತಿಯ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ಸ್ವಚ್ಛಂದವಾಗಿ ಹಾರುವ ಏಕೈಕ ಸ್ಥಳ ಎಂಬ ಖ್ಯಾತಿಯನ್ನು ಪಡೆದಿದೆ.
ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಬೆಂಗಳೂರಿನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಮಂಡ್ಯ ಜಿಲ್ಲೆಯಲ್ಲಿರುವ ಸುಂದರವಾದ ಪಕ್ಷಿಧಾಮವಾಗಿದೆ . ಸರಿಸುಮಾರು 614 ಎಕರೆ ಪ್ರದೇಶದಲ್ಲಿ ಹರಡಿದೆ.
ಕೊಕ್ಕರೆ ಬೆಳ್ಳೂರು ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಗ್ರಾಮ ಮತ್ತು ತೆರೆದ ಪಕ್ಷಿಧಾಮವಾಗಿದೆ. ವಲಸೆ ಬಂದ ಕೊಕ್ಕರೆಗಳಿಂದಾಗಿ ಈ ಊರಿಗೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು ಬಂದಿದೆ. ಇಲ್ಲಿ ಕೊಕ್ಕರೆಗಳು ಮಾತ್ರವಲ್ಲದೆ ಅನೇಕ ಜಾತಿಯ ನೀರು ಹಕ್ಕಿಗಳು ಕಾಣ ಸಿಗುತ್ತವೆ.
ಇದು ಬೇರೆ ಪಕ್ಷಿಧಾಮಕ್ಕಿಂತಲೂ ಭಿನ್ನವಾಗಿದೆ, ಹೇಗೆಂದರೆ ಇದು ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಸ್ಥಳವಲ್ಲ ಬದಲಿಗೆ ಇದೊಂದು ಗ್ರಾಮವಾಗಿದ್ದು ಇಲ್ಲಿ ಪೆಲಿಕಾನ್ ಹಾಗೂ ಪೇಂಟೆಡ್ ಸ್ಟ್ರೋಕ್ ಅವುಗಳಂಥ ವಿಶೇಷವಾದ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ನಿರ್ಮಿಸಿಕೊಂಡಿರುವ ಪಕ್ಷಿ ವನವಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಹಾಗೆಯೇ ಪಕ್ಷಿಗಳೂ ಕೂಡ ಗ್ರಾಮದ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಲ್ಲೇ ಜನಪ್ರಿಯಗೊಳಿಸಿವೆ ಎಂದರೆ ತಪ್ಪಾಗಲಾರದು.
‘ಸ್ಟಾರ್ ವಿಲೇಜ್’
ಜನ ಸಮುದಾಯದ ನಡುವೆ ದೇಶ ವಿದೇಶಗಳಿಂದ ಬರುವ ಪೆಲಿಕಾನ್, ಹೆಜ್ಜಾರ್ಲೆ ಹಾಗೂ ಇನ್ನಿತರ ಜಾತಿಯ ಕೊಕ್ಕರೆಗಳು ವಾಸವಾಗಿರೋ ಕಾರಣದಿಂದ ಈ ಗ್ರಾಮಕ್ಕೆ ‘ಸ್ಟಾರ್ ವಿಲೇಜ್’ ಎಂಬ ಬಿರುದು ದೊರೆತಿದೆ. ಈ ಗೌರವವನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಅರ್ಥ್ ಡೇ ನೆಟ್ವರ್ಕ್ ನೀಡಿದೆ.
ಈ ಸಂಸ್ಥೆಯು ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಗ್ರಾಮವನ್ನು ಪರಿಚಯಿಸಿದೆ.
ಬೆಳ್ಳೂರು ಗ್ರಾಮದ ಜನರಿಗೆ ಹಕ್ಕಿಗಳ ಮೇಲಿರುವ ಪ್ರೀತಿ, ತಮ್ಮ ಜಮೀನಿನಲ್ಲಿ ಹಕ್ಕಿಗಳ ಅನುಕೂಲಕ್ಕಾಗಿ ಮರಗಳನ್ನು ಬೆಳೆಸಿರುವ ರೈತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವ ಬಗ್ಗೆಯೂ ಕೂಡ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಂಸೆ ಪಡೆದಿರುವ ಗ್ರಾಮಕ್ಕೆ ಗೌರವ ಸಂದಿದೆ.
ಪಕ್ಷಿಗಳು:
ನೀರು ಹಕ್ಕಿ (ಪೆಲಿಕನ್) ಮತ್ತು ಕೊಕ್ಕರೆಗಳು ಕೊಕ್ಕರೆ ಬೆಳ್ಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇವು ಹಳ್ಳಿಯ ಹುಣಸೆ ಮತ್ತು ಮಾವಿನ ಮರಗಳ ಮೇಲೆ ಗೂಡುಕಟ್ಟುತ್ತವೆ. ಸುಮಾರು 200 ಇತರ ಪಕ್ಷಿ ಪ್ರಭೇದಗಳನ್ನು ಕೊಕ್ಕರೆ ಬೆಳ್ಳೂರಿನಲ್ಲಿ ಗುರುತಿಸಲಾಗಿದೆ.
ನಿವಾಸಿ ಮತ್ತು ವಲಸೆ ಹಕ್ಕಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ.
ಪಕ್ಷಿ ಪ್ರಭೇದಗಳಲ್ಲಿ ಪೆಲಿಕಾನ್‌ಗಳು, ಐಬಿಸ್, ಹೆರಾನ್‌ಗಳು, ಕಾರ್ಮೊರಂಟ್‌ಗಳು ಮತ್ತು ಇತರವುಗಳು ಸೇರಿವೆ.
ಅಭಯಾರಣ್ಯವು ಹಲವಾರು ಜಾತಿಯ ಸಸ್ತನಿಗಳು, ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ. ಇಲ್ಲಿ ಕಂಡುಬರುವ ಕೆಲವು ಸಾಮಾನ್ಯ ಸಸ್ತನಿಗಳಲ್ಲಿ ಕಾಡು ಹಂದಿಗಳು ಮತ್ತು ನರಿಗಳು ಸೇರಿವೆ, ಹಾವುಗಳು ಮತ್ತು ಆಮೆಗಳಂತಹ ಸರೀಸೃಪಗಳನ್ನು ಸಹ ಕಾಣಬಹುದು.
ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ಮತ್ತು ಮಾರ್ಚ್ , ಅಭಯಾರಣ್ಯಕ್ಕೆ ಭೇಟಿ ನೀಡುವವರು ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಆನಂದಿಸಬಹುದು, ಸುತ್ತಲೂ ಹಚ್ಚ ಹಸಿರಿನಿಂದ ಮತ್ತು ಚಿಲಿಪಿಲಿ ಹಕ್ಕಿಗಳ ಶಬ್ದಗಳಿಂದ ಆವೃತವಾಗಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)