ಐಪಿಎಲ್ 20-20ಯ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ, ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ 60 ರನ್‌ಗಳ ರೋಚಕ ಜಯಭೇರಿ ಬಾರಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಆರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಹಾಗೂ ಎನ್. ರಾಣಾ ಅವರು ಮೈದಾನಕ್ಕಿಳಿದು ಜೊತೆಯಾಟ ಆಡಿದರು. ಗಿಲ್ 24 ಬಾಲ್‌ಗಳಿಗೆ 36 ರನ್ ಗಳಿಸಿದರೆ, ರಾಣಾ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಆರ್. ತ್ರಿಪಾಠಿ ಹಾಗೂ ಇ. ಮಾರ್ಗನ್ ಅವರು ಅದ್ಭುತ ಆಟ ಆಡಿದರು. ತ್ರಿಪಾಠಿ 34 ಬಾಲ್‌ಗಳಿಗೆ 39 ರನ್ ಗಳಿಕೆ ಮಾಡಿದರೆ, ಮಾರ್ಗನ್ 35 ಬಾಲ್‌ಗಳಿಗೆ 68 ರನ್‌ಗಳ ಮಿಂಚಿನಾಟ ಆಡಿದರು. ಕೆಕೆಆರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಆರ್‌ಆರ್ ತಂಡ ಕೆಕೆಆರ್ ನೀಡಿದ ಸವಾಲನ್ನು ಸಾಧಿಸುವಲ್ಲಿ ವಿಫಲವಾಯಿತು. ಆರ್‌ಆರ್ ತಂಡದಿಂದ ಆರಂಭಿಕ ಆಟಗಾರರಾಗಿ ರಾಬಿನ್ ಉತ್ತಪ್ಪ ಹಾಗೂ ಬಿ. ಸ್ಟೋಕ್ಸ್ ಮೈದಾನಕ್ಕಿಳಿಸು ಬ್ಯಾಟಿಂಗ್ ಮಾಡಿದರು. ಆದರೆ ಇವರ ಆಟ ಆಸಕ್ತಿಕರವಾಗಿರಲಿಲ್ಲ. ಉತ್ತಪ್ಪ 2 ಬಾಲ್‌ಗಳಿಗೆ 6 ಎನ್ ಗಳಿಸಿದರೆ ಸ್ಟೋಕ್ಸ್ 11 ಬಾಲ್‌ಗಳಿಗೆ 18 ರನ್ ಗಳಿಸಿತು. ತದನಂತರ ಬಂದ ಜೆ. ಬಟ್ಲರ್ ಹಾಗೂ ಆರ್. ತೇವಾಟಿಯ ಕ್ರಮವಾಗಿ 35 ರನ್ (22 ಬಾಲ್‌ಗಳಿಗೆ) ಮತ್ತು 31 ರನ್ (37 ಬಾಲ್‌ಗಳಿಗೆ) ಗಳಿಸಿದರೂ ತಂಡಕ್ಕೆ ಸಹಕಾರಿಯಾಗಲಿಲ್ಲ. ಆರ್‌ಆರ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಪರಾಜಿತವಾಯಿತು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು