ಜಿಲ್ಲೆಯ ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದ ಬಾಪುಸಾಹೇಬ್ ಇನಾಮದಾರ್ ಹೃದಯಘಾತದಿಂದ ಮೃತಪಟ್ಟಿದ್ದಾರೆ.ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಕಲ್ಲು ತೂರಾಟ – ಬಸ್‍ಗಳ ಸಂಚಾರ ಸ್ಥಗಿತ
ಮೃತರ ಪುತ್ರ ರಾಜೇಂದ್ರ ಇನಾಮದಾರ 10 ಎಕರೆ ಜಮೀನಿನ ಖಾತಾ ಬದಲಾವಣೆ ಅರ್ಜಿ ಸಲ್ಲಿಸಿದ್ದರು. ಇತ್ತ ಬಾಪುಸಾಹೇಬ್ ಹೆಸರಲ್ಲಿದ್ದ ಜಮೀನನ್ನು ಮಗ ರಾಜೇಂದ್ರ ಹೆಸರಿಗೆ ಖಾತಾ ಬದಲಾವಣೆಗೆ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ 5 ಲಕ್ಷ ರೂ. ಲಂಚ ಹಾಗೂ ಶ್ಯೂರಿಟಿಗಾಗಿ 20 ಲಕ್ಷ ರೂ. ಮೌಲ್ಯದ ಖಾಲಿ ಚೆಕ್ ಕೇಳಿದ್ದರು.
ರಾಜೇಂದ್ರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತಡರಾತ್ರಿ ನಡೆಸಿದ ದಾಳಿಯಲ್ಲಿ 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಭೂಸುಧಾರಣಾ ನಿರ್ವಾಹಕ ಪ್ರಸನ್ನ ಅವರನ್ನು ಬಂಧಿಸಿದ್ದರು
ಮಗ ರಾಜೇಂದ್ರ ಇನಾಮದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಸುದ್ದಿ ತಿಳಿದ ಬಳಿಕ ರಾಜೇಂದ್ರ ತಂದೆ ಬಾಪುಸಾಹೇಬ್ ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿಗಳಾದ ತಹಶೀಲ್ದಾರ್, ಭೂಸುಧಾರಣಾ ನಿರ್ವಾಹಕ ಹಿಂಡಲಗಾ ಜೈಲು ಸೇರಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು