ಸಂವಿಧಾನ ಉಳಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ನಾಯಕ ಪಟೇರಿಯಾ

Team Newsnap
1 Min Read
Congress leader Pateriya, who had called for 'Kill Modi', was arrested 'ಮೋದಿ ಹತ್ಯೆ ಮಾಡಿ' ಕರೆ ನೀಡಿದ್ದ ಕಾಂಗ್ರೆಸ್ ನಾಯಕ ಪಟೇರಿಯಾ ಬಂಧನ

ಸಂವಿಧಾನ ಉಳಿಯಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ರಾಜಾ ಪಟೇರಿಯಾ ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಾಜಾ ಮುಂದಿನ ಚುನಾವಣೆಯನ್ನು ಗೆಲ್ಲಲು ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.ಶೀಘ್ರವೇ ಸಚಿವ ಸಂಪುಟ ವಿಸ್ತರಣೆ : ಜಾರಕಿಹೊಳಿ ಈಶ್ವರಪ್ಪ, ಸೇರಿ ಐವರಿಗೆ ಸಚಿವ ಸ್ಥಾನ?

ಮುಂದೊಂದು ದಿನ ಪ್ರಧಾನಿ ಮೋದಿ ಚುನಾವಣೆ ಪ್ರಕ್ರಿಯೆಗಳಿಗೆ ಅಂತ್ಯ ಹಾಡುತ್ತಾರೆ. ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತರ ಜೀವನ ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ ಎಂದಿದ್ದಾರೆ.

ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಸಿ ನೀಡಿ ಮಾತನಾಡಿದ ಕಾಂಗ್ರೆಸ್​ ನಾಯಕ, ತಾವು ಬಳಸಿರುವ ‘ಕೊಲೆ ಪದ’ವನ್ನು ‘ಚುನಾವಣೆಯ ಸೋಲು’ ಎಂದು ವ್ಯಾಖ್ಯಾನಿಸಿದ್ದಾರೆ.


ಮರ್ಡರ್ ಎಂದರೆ ಸೋಲು ಎಂದು ಹೇಳಿರುವುದು ವೈರಲ್ ಆಗಿದೆ. ಕೈನಾಯಕನ ಈ ಹೇಳಿಕೆಗೆ ಭಾರೀ ವಿರೊಧ ವ್ಯಕ್ತವಾಗಿದೆ. ಬಿಜೆಪಿ ವಾಗ್ದಾಳಿ ನಡೆಸಿದೆ.

Share This Article
Leave a comment