December 23, 2024

Newsnap Kannada

The World at your finger tips!

gruha

ಮೈಸೂರು: ಮನೆ ಯಜಮಾನಿಗೆ ಮಾಸಿಕ 2,000 ರು : ಗೃಹಲಕ್ಷ್ಮೀ ಯೋಜನೆಗೆ ಖರ್ಗೆ , ರಾಹುಲ್ ಚಾಲನೆ

Spread the love

ಮೈಸೂರು : ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ನಾಲ್ಕನೇ ಗ್ಯಾರಂಟಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರು ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ಬುಧವಾರ ಚಾಲನೆ ನೀಡಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಈ ಯೋಜನೆಗೆ ಚಾಲನೆ ಸಿಕ್ಕಿದೆ.

ಸಮಾರಂಭದಲ್ಲಿ ರಿಮೋಟ್​ ಬಟನ್​ ಒತ್ತುವ ಮೂಲಕ 2000 ರು ಚೆಕ್​ ಪ್ರದರ್ಶನ ಮಾಡುವುದರೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕೃತ ಚಾಲನೆ ನೀಡಿದರು.

ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಸರ್ಕಾರದ ನೂರು ದಿನ ಆಡಳಿತದ ಪುಸ್ತಕವನ್ನು ಕಾಂಗ್ರೆಸ್​ ನಾಯಕರು ಬಿಡುಗಡೆ ಮಾಡಿದರು.ಮಾಜಿ CM ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಫಲಾನುಭವಿ ಮಹಿಳೆಯರಿಗೆ ಡಿಬಿಟಿ‌ ಮೂಲಕ ಖರ್ಗೆ ಮತ್ತು ರಾಹುಲ್​ ಗಾಂಧಿ ಅವರು ಹಣ ವರ್ಗಾವಣೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!