December 24, 2024

Newsnap Kannada

The World at your finger tips!

kgf2

ಕೆಜಿಎಫ್​ ಚಾಪ್ಟರ್-2 ಚಿತ್ರ ಜುಲೈ 16 ಕ್ಕೆ ರಿಲೀಸ್ : ದೃಶ್ಯ ಕಾವ್ಯ ಕ್ಕೆ ಕಾತುರರಾದ ಅಭಿಮಾನಿಗಳು

Spread the love

ಧೂಳೆಬ್ಬಿಸಲಿರುವ ರಾಕಿ ಭಾಯ್ ಬ್ರಾಂಡ್ ನ ಕೆಜಿಎಫ್​ ಚಾಪ್ಟರ್- 2
ಜುಲೈ 16 ರಂದು ರಿಲೀಸ್ ಆಗಲಿದೆ.
ಕೆಜಿಎಫ್​ ದೃಶ್ಯಕಾವ್ಯ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಹೆಂಬಾಳೆ ಫಿಲ್ಮ್ಸ್​​ ನಿರ್ಮಿಸುತ್ತಿರುವ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಕಳೆದ ಅಕ್ಟೋಬರ್​ 23ರಂದು ರಿಲೀಸ್​ ಆಗಲಿದೆ ಅಂತ ಕೆಜಿಎಫ್​ ತಂಡವೇ ಅಧಿಕೃತ ಮಾಹಿತಿ ನೀಡಿತ್ತು.

ಕೊರೊನಾ ಕಾರಣದಿಂದ ಸಿನಿಮಾದ ಶೂಟಿಂಗ್ ತಡವಾದ ಕಾರಣ ಬಿಡುಗಡೆ ದಿನಾಂಕ ತಡವಾಗಿತ್ತು. ಇತ್ತೀಚೆಗಷ್ಟೇ ಟೀಸರ್​ ಬಿಡುಗಡೆ ಮಾಡಿ ಕೆಜಿಎಫ್​ ತಂಡ ಅಭಿಮಾನಿಗಳಿಗೆ ಮುದ ಕೊಟ್ಟಿತ್ತು.‌ ಅಷ್ಟೇ ಅಲ್ಲದೆ ಯೂಟ್ಯೂಬ್​​​ ನಲ್ಲಿ ದಾಖಲೆ ಬರೆದಿದ್ದ ಕೆಜಿಎಫ್​-2 ಸಿನಿಮಾದ ಟೀಸರ್​​, ಹೊಸ ಇತಿಹಾಸವನ್ನೇ ನಿರ್ಮಿಸಿತ್ತು.

Copyright © All rights reserved Newsnap | Newsever by AF themes.
error: Content is protected !!