ನನಗೆ ಅರ್ಥವಾಗದ ಕನ್ನಡ ಭಾಷೆ, ನನ್ಮುಂದೆ ಮಾತನಾಡಬೇಡ ಅಂತ, ತಲೆಗೆ ರಕ್ತ ಹೆಪ್ಪುಗಟ್ಟುವಂತೆ ಕನ್ನಡದ ಯುವತಿಗೆ, ಕೇರಳದ ಯುವತಿಯೊಬ್ಬಳು ಹಲ್ಲೆ ಮಾಡಿದ್ದಾಳೆ.
ಬಿಬಿಎಂಪಿಯಲ್ಲಿ ವೈದ್ಯೆಯಾಗಿರುವ ಯುವತಿ ಸೃಷ್ಟಿ ಬಿಟಿಎಂ ಲೇಔಟ್‍ನ ಪಿಜಿಯಲ್ಲಿ ಕೇರಳ ಮೂಲದ ಅಸ್ಸೇಲಾ ಎಂಬ ಯುವತಿ ರೂಂಮೇಟ್ ಆಗಿದ್ದಾರೆ.ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಇನ್ನಿಲ್ಲ
ಮೊನ್ನೆ ಸೃಷ್ಟಿ ಫೋನಲ್ಲಿ ಕನ್ನಡ ಮಾತನಾಡ್ತಿರುವಾಗ, ನನಗೆ ಕನ್ನಡ ಅರ್ಥ ಆಗಲ್ಲ. ಇಂಗ್ಲೀಷ್‍ನಲ್ಲೇ ಮಾತನಾಡು ಅಂತ ಕನ್ನಡ ಭಾಷೆಗೆ ಅವಮಾನಿಸಿ, ಧಮ್ಕಿ ಹಾಕಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸೃಷ್ಟಿ ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ತಲೆಯಲ್ಲಿ ರಕ್ತಹೆಪ್ಪುಗಟ್ಟಿದ್ದು, ಸಿಟಿ ಸ್ಕ್ಯಾನಿಂಗ್‍ಗೆ ನಿಮಾನ್ಸ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ.
2 ವರ್ಷದಿಂದ ಒಟ್ಟಿಗೆ ವಾಸವಿರುವ ಇವರಿಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಮನಸ್ತಾಪ, ಗಲಾಟೆಗಳು ಭಾಷೆಯ ವಿಚಾರವಾಗಿ ನಡೆದಿತ್ತಂತೆ. ಆದರೆ ಮೊನ್ನೆ ಕನ್ನಡ ಭಾಷೆಯನ್ನು ತೀರಾ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಈ ಘಟನೆ ಬಳಿಕ ಪಿಜಿ ಮಾಲೀಕರು ಕೇರಳ ಮೂಲದ ಅಸ್ಸೇಲಾ ಎಂಬ ಯುವತಿಯನ್ನು ಹೊರ ಕಳಿಸಿದ್ದಾರೆ. ಡಾ ಸೃಷ್ಟಿ ಅಸ್ಸೇಲಾ ವಿರುದ್ದ ಮೈಕೋಲೇಔಟ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
- ಬೆಳ್ಳೂರು ಸಮೀಪ ಸಾರಿಗೆ ಬಸ್ ಗೆ ಕಾರು ಢಿಕ್ಕಿ : ನಾಲ್ವರ ಸಾವು
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ