December 30, 2024

Newsnap Kannada

The World at your finger tips!

WhatsApp Image 2023 01 13 at 8.06.52 AM

Kerala girl attacked Kannadati who spoke Kannada ಕನ್ನಡ ಮಾತಾಡಿದ ಕನ್ನಡತಿಯ ಮೇಲೆ ಹಲ್ಲೆ ಮಾಡಿದ ಕೇರಳ ಯುವತಿ

ಕನ್ನಡ ಮಾತಾಡಿದ ಕನ್ನಡತಿಯ ಮೇಲೆ ಹಲ್ಲೆ ಮಾಡಿದ ಕೇರಳ ಯುವತಿ

Spread the love

ನನಗೆ ಅರ್ಥವಾಗದ ಕನ್ನಡ ಭಾಷೆ, ನನ್ಮುಂದೆ ಮಾತನಾಡಬೇಡ ಅಂತ, ತಲೆಗೆ ರಕ್ತ ಹೆಪ್ಪುಗಟ್ಟುವಂತೆ ಕನ್ನಡದ ಯುವತಿಗೆ, ಕೇರಳದ ಯುವತಿಯೊಬ್ಬಳು ಹಲ್ಲೆ ಮಾಡಿದ್ದಾಳೆ.

ಬಿಬಿಎಂಪಿಯಲ್ಲಿ ವೈದ್ಯೆಯಾಗಿರುವ ಯುವತಿ ಸೃಷ್ಟಿ ಬಿಟಿಎಂ ಲೇಔಟ್‍ನ ಪಿಜಿಯಲ್ಲಿ ಕೇರಳ ಮೂಲದ ಅಸ್ಸೇಲಾ ಎಂಬ ಯುವತಿ ರೂಂಮೇಟ್ ಆಗಿದ್ದಾರೆ.ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಇನ್ನಿಲ್ಲ

ಮೊನ್ನೆ ಸೃಷ್ಟಿ ಫೋನಲ್ಲಿ ಕನ್ನಡ ಮಾತನಾಡ್ತಿರುವಾಗ, ನನಗೆ ಕನ್ನಡ ಅರ್ಥ ಆಗಲ್ಲ. ಇಂಗ್ಲೀಷ್‍ನಲ್ಲೇ ಮಾತನಾಡು ಅಂತ ಕನ್ನಡ ಭಾಷೆಗೆ ಅವಮಾನಿಸಿ, ಧಮ್ಕಿ ಹಾಕಿದ್ದಾರೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸೃಷ್ಟಿ ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ತಲೆಯಲ್ಲಿ ರಕ್ತಹೆಪ್ಪುಗಟ್ಟಿದ್ದು, ಸಿಟಿ ಸ್ಕ್ಯಾನಿಂಗ್‍ಗೆ ನಿಮಾನ್ಸ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ.

2 ವರ್ಷದಿಂದ ಒಟ್ಟಿಗೆ ವಾಸವಿರುವ ಇವರಿಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಮನಸ್ತಾಪ, ಗಲಾಟೆಗಳು ಭಾಷೆಯ ವಿಚಾರವಾಗಿ ನಡೆದಿತ್ತಂತೆ. ಆದರೆ ಮೊನ್ನೆ ಕನ್ನಡ ಭಾಷೆಯನ್ನು ತೀರಾ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಈ ಘಟನೆ ಬಳಿಕ ಪಿಜಿ ಮಾಲೀಕರು ಕೇರಳ ಮೂಲದ ಅಸ್ಸೇಲಾ ಎಂಬ ಯುವತಿಯನ್ನು ಹೊರ ಕಳಿಸಿದ್ದಾರೆ. ಡಾ ಸೃಷ್ಟಿ ಅಸ್ಸೇಲಾ ವಿರುದ್ದ ಮೈಕೋಲೇಔಟ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!