ಕೇರಳದ ಉದ್ಯಮಿ ಹನಿಟ್ರ್ಯಾಪ್ : ಯುವತಿ ಸೇರಿ ಮೂವರ ಬಂಧನ

Team Newsnap
1 Min Read

ಮೈಸೂರು : ಕೇರಳಾ ಉದ್ಯಮಿಯೊಬ್ಬರನ್ನು ಬಲವಂತವಾಗಿ ಎಳೆದೊಯ್ದು ಮಹಿಳೆಯ ಜೊತೆ ನಗ್ನವಾಗಿ ಮಲಗಿರುವಂತೆ ಫೋಟೋ ತೆಗೆದು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಮೂವರು ಆರೋಪಿಗಳನ್ನು ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ .

ಫಜಲುಲ್ಲಾ ರೆಹಮಾನ್, ರಿಜ್ವಾನ್ ಹಾಗೂ ಮೋನಾ ಬಂಧಿತ ಆರೋಪಿಗಳು.

ಇದು 9 ತಿಂಗಳ ಹಿಂದೆ ನಡೆದ ಘಟನೆಯ ಜಾಡು ಹಿಡಿದು ತನಿಖೆ ನಡೆಸಿದ ಗ್ರಾಮಾಂತರ ಪೊಲೀಸರು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ .

ಆರೋಪಿಗಳಿಂದ 50 ಸಾವಿರ ರು ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರ್ ವಶಪಡಿಸಿಕೊಂಡಿದ್ದಾರೆ.

ಹನಿಟ್ರ್ಯಾಪ್ ಹೇಗೆ?

ಕೇರಳದ ತಿರುನೆಲ್ಲಿಯ ಉದ್ಯಮಿ ಸುನ್ನಿ ಎಂಬುವರನ್ನು ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ನಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ಸುನ್ನಿ ರವರು ಚೆನ್ನೈನಿಂದ ಹಿಂದಿರುಗಿ ಮೈಸೂರು ಮೂಲಕ ತಮ್ಮ ಕಾರಿನಲ್ಲಿ ಕೇರಳಾ ಕ್ಕೆ ತೆರಳುತ್ತಿದ್ದ ವೇಳೆ ಮಾನಂದವಾಡಿ ರಸ್ತೆಯಲ್ಲಿ ಈ ಆರೋಪಿಗಳು ಅಡ್ಡಗಟ್ಟಿ ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದು ಮೋನ ಜೊತೆ ನಗ್ನವಾಗಿ ಮಲಗಿಸಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ.

ನಂತರ ಸುನ್ನಿ ರವರಿಗೆ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಹೆದರಿಸಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.ಗೌರವಕ್ಕೆ ಅಂಜಿದ ಸುನ್ನಿ 5 ಲಕ್ಷ ಪಾವತಿಸಿದ್ದಾರೆ.ಅಲ್ಲದೆ ಸುನ್ನಿ ರವರು ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.ನಡೆದ ಘಟನೆಯನ್ನು ಸುನ್ನಿರವರು ತಿರುನೆಲ್ಲಿ ಠಾಣೆ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದ್ದಾರೆ.

ಕೃತ್ಯವು ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನಲೆ ಪ್ರಕರಣ ವರ್ಗಾವಣೆ ಆಗಿದೆ.ಪ್ರಕರಣದ ತನಿಖೆ ಕೈಗೊಂಡ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕನ್ನಡ ಭಾಷಾ ಸಮಗ್ರ ಅಭಿವೃದ್ದಿಗೆ ಫೆ 28ರೊಳಗೆ ಸುಗ್ರಿವಾಜ್ಞೆ ಜಾರಿ – ಸಿಎಂ

ಈ ತಂಡ ಮಡಿಕೇರಿಯಲ್ಲೂ ಇಂತಹದ್ದೇ ಕೃತ್ಯ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ .

Share This Article
Leave a comment