ಬೆಂಗಳೂರು: ‘KEA’ ಸೀಟ್ ಬ್ಲಾಕಿಂಗ್ ಹಗರಣದ ಸಂಬಂಧ ಮಲ್ಲೇಶ್ವರಂ ಠಾಣೆಯ ಪೊಲೀಸರು ಪ್ರಮುಖ ತನಿಖೆಯನ್ನು ಮುಂದುವರಿಸುತ್ತಿದ್ದು, ಈ ಹಗರಣದಲ್ಲಿ ಭಾಗಿಯಾದ ಕಿಂಗ್‌ಪಿನ್ ಸೇರಿದಂತೆ 10 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.
ಈ ಕೇಸ್ ನಿಂದ ಸಂಬಂಧಪಟ್ಟಂತೆ, ಬೆಂಗಳೂರಿನ ಮೂರು ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಿಗೆ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನೋಟಿಸ್ ಪಡೆದಿರುವ ಕಾಲೇಜುಗಳು ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಮತ್ತು ಆಕಾಶ್ ಇಂಜಿನಿಯರಿಂಗ್ ಕಾಲೇಜು. ಪೊಲೀಸ್ ಇಲಾಖೆ ಈ ಕಾಲೇಜುಗಳಿಂದ ವಿದ್ಯಾರ್ಥಿಗಳ ದಾಖಲಾತಿ, ಕೌನ್ಸೆಲಿಂಗ್ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ವಿಚಾರಣೆಗೆ ಸಹಕರಿಸಲು ಕೋರಿದೆ.
ಈ ಹಗರಣದ ಪ್ರಮುಖ ಆರೋಪಿಯಾಗಿರುವ ಹರ್ಷ ಮತ್ತು ಇತರ ಆರೋಪಿಗಳನ್ನು (ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್, ಮತ್ತು ಅವಿನಾಶ್) ಈಗಾಗಲೇ ಬಂಧಿಸಲಾಗಿದೆ. ಹರ್ಷನನ್ನು ಈ ಪ್ರಕರಣದ ಕಿಂಗ್‌ಪಿನ್ ಎಂದು ಗುರುತಿಸಲಾಗಿದೆ.ಇದನ್ನು ಓದಿ –ಬೆಂ-ಮೈ ಎಕ್ಸ್‌ಪ್ರೆಸ್ – ಮಣಿಪಾಲ್ ಆಸ್ಪತ್ರೆ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಅನುಮತಿ
ಆರೋಪಿಗಳ ವಿರುದ್ಧ ಆರೋಪವೇನೆಂದರೆ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಸೆಟ್ ಮಾಡಿದ ಸೀಟ್‌ಗಳನ್ನು ಬಿಡಿಸುವ ಮೂಲಕ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಮ್ಯಾನೇಜ್ಮೆಂಟ್ ಕೋಟಾ ಅಡಿ ಮಾರಾಟ ಮಾಡುತ್ತಿದ್ದರು. ಇವರು ಮಧ್ಯವರ್ತಿಗಳ ಸಹಾಯದಿಂದ ಈ ಅಕ್ರಮವನ್ನು ನಡೆಸುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
More Stories
ವಿಧಾನಸೌಧ ಆವರಣದಲ್ಲಿ ಜನವರಿ 27ಕ್ಕೆ ಭುವನೇಶ್ವರಿ ಕಂಚಿನ ಪ್ರತಿಮೆಯ ಅನಾವರಣ
”ಹೆಣ್ಣು ಬೇಕು!”
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ