ಕಾವೇರಿ ನೀರು ಬಿಡುಗಡೆ: ಸಿಡಿದೆದ್ದ ರೈತರು- KRS ನಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Team Newsnap
1 Min Read

ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ಖಂಡಿಸಿ ಧರಣಿ ನಡೆಸಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ವಿರುದ್ಧ ರೈತರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಂಗಳವಾರ ಕೆ ಆರ್ ಎಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ ಜಲಾಶಯದ ಬಳಿಕಾವೇರಿ ನೀರಿಗಾಗಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.

ಕೆಆರ್‌ಎಸ್‌ ಡ್ಯಾಮ್ ಬಳಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕುರುಡು ನ್ಯಾಯಾಧೀಕರಣ ಎಂದು ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.ಸರ್ಕಾರ ರೈತರೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈಗಾಗಲೇ ತಮಿಳುನಾಡಿಗೆ ಒಂದುವರೆ ಲಕ್ಷ ಕ್ಯೂಸೆಕ್ ನೀರನ್ನು ಡ್ಯಾಮ್ ನಿಂದ ಹರಿ ಬಿಡಲಾಗಿದೆ. ಹೀಗಾದರೆ ನಮಗಿಲ್ಲಿ ಕುಡಿಯುವುದಕ್ಕೆ ನೀರಿಲ್ಲ ಆದರೆ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತೀರಾ? ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂದರ್ಭದಲ್ಲಿ ಭೂಮಿತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಕೃಷ್ಣೆಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಹಲವಾರು ಬಾರಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಇದೀಗ ಮತ್ತೆ ಕಾವೇರಿ ನಿರ್ವಹಣಾ ಸಮಿತಿಯು ದಿನವೊಂದಕ್ಕೆ 5,000 ಕ್ಯೂ ಸೆಟ್ ನೀರಿನಂತೆ ಹದಿನೈದು ದಿನಗಳವರೆಗೆ ನೀರು ಬಿಡುವಂತೆ ಆದೇಶಿಸಿದೆ ಇದನ್ನು ನಾವು ಖಂಡಿಸುತ್ತೇವೆ.ಶಿವಮೊಗ್ಗ- ಬೆಂಗಳೂರು ನಡುವೆ ನಾಳೆಯಿಂದ ವಿಮಾನಯಾನ ಸೇವೆ ಆರಂಭ

ನಗರ ಪ್ರದೇಶಗಳಲ್ಲಿ ಸರಿಯಾಗಿ ಕುಡಿಯೋದಕ್ಕೆ ನೀರು ಸಿಗುತ್ತಿಲ್ಲ ಇನ್ನೂ ಗ್ರಾಮೀಣ ಭಾಗದಲ್ಲಿ ನಮ್ಮ ಪರಿಸ್ಥಿತಿ ಹೇಗಾಗಿರಬೇಡ? ನಮಗೆ ಕುಡಿಯೋಕೆ ಇಲ್ಲಿ ನೀರಿಲ್ಲ ಇನ್ನೂ ತಮಿಳುನಾಡಿಗೆ ಬೆಳೆ ಬೆಳೆಯುವುದಕ್ಕೆ ನೀರು ಬಿಡಲು ಇವರು ಹೇಗೆ ಆದೇಶ ನೀಡಿದರು? ಇದೇ ರೀತಿ ಮುಂದುವರಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Share This Article
Leave a comment