October 6, 2024

Newsnap Kannada

The World at your finger tips!

BJP , JDS , alliance

ಕಾವೇರಿ ನದಿ ನೀರಿನ ಹಂಚಿಕೆ: ರಾಜ್ಯದ ರೈತರ ಹಿತ ಕಾಪಾಡುವುದು ಮುಖ್ಯ – ಎಚ್ ಡಿ ಕೆ

Spread the love

ಮಂಡ್ಯ : ಕೆಆರ್‌ಎಸ್‌‌ನಲ್ಲಿ ಹೆಚ್‌ಡಿಕೆ ಹೇಳಿಕೆ.ರಾಜ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆ ಒಣಗಿ ಹೋಗಿದೆ. ಕನಿಷ್ಠ ಬೆಳೆಗಳಿಗೆ ಎರಡು ಕಟ್ಟು ನೀರು ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶನಿವಾರ ಒತ್ತಾಯಿಸಿದರು

ಕೆಆರ್ ಎಸ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ
ಎಚ್ ಡಿ ಕೆ ಕಾವೇರಿ ಹಂಚಿಕೆಯ ವಿಷಯದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಲಘುವಾಗಿ ಮತ್ತು ಜವಾಬ್ದಾರಿಯಿಲ್ಲದೇ ನಡೆದುಕೊಂಡ ಪರಿಣಾಮ ರೈತರು ಸಂಕಷ್ಟದಲ್ಲಿ ಸಿಲುಕವಂತೆ ಆಯಿತು ಎಂದರು.

ಪ್ರಾಧಿಕಾರ ಸಭೆ ಕರೆದಾಗ ತಮಿಳುನಾಡಿನ 15 ಮಂದಿ ಅಧಿಕಾರಿಗಳು ಇರ್ತಾರೆ. ಆದರೆ ನಮ್ಮವರು ಲಘುವಾಗಿ ಈ ಸಭೆ ಮತ್ತು ವಿಚಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರತಿ ಬಾರಿಯೂ ತಮ್ಮ ನಿಲುವು ಮತ್ತು ಆಶಯಗಳನ್ನು ಈಡೇರಿಸಿಕೊಳ್ಳಲುತಮಿಳುನಾಡಿನವರು ಸಭಾತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಈ ಕಾರಣಕ್ಕಾಗಿ ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣ. ಸರ್ವ ಪಕ್ಷಗಳ ಸಭೆ ಕರೆಯಲು ಕೂಡ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

ಆದರೆ ಈ ಕಾಂಗ್ರೆಸ್ ನವರು ಮಾತ್ರನಮಗೆ ಪೇಪರ್ ಪೆನ್ ಕೊಡಿ ನಿಮ್ಮ ಉಳಿಸುತ್ತೇವೆ ಎಂದು (ನೀರಾವರಿ ಸಚಿವರು ) ಹೇಳಿದ್ದರು. ಪಾಪ ರೈತರು ಮಾತು ನಂಬಿ ಅಧಿಕಾರ ಕೊಟ್ಟರು. ಈಗ ರೈತರು ಪಶ್ಚಾತಾಪ ಪಡುವಂತಾಗಿದೆ. ಇದೀಗ ರೈತರನ್ನೇ ಕೋರ್ಟ್‌ಗೆ ಹೋಗಿ ಎಂದು ಸರ್ಕಾರ ಹೇಳುತ್ತದೆ.

ಕಳೆದ ಒಂದು ತಿಂಗಳಿಂದ ಹೋದ ನೀರನ್ನು ನಿಲ್ಲಿಸಿದರೆ ನಮ್ಮ ರೈತರನ್ನು ಉಳಿಸಬಹುದಿತ್ತು. ಪ್ರಾಧಿಕಾರ ಹೇಳಿದ ತಕ್ಷಣ ಬಿಟ್ರು. ಈಗ ಕೋರ್ಟ್ ನಮ್ಮ ಮುಂದೆ ಬರಬೇಡಿ, ನೀವು ಕೂತು ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ಒಟ್ಟಿಗೆ ಕುಳಿತು ಸಂಕಷ್ಟ ಸಮಯದಲ್ಲಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಬೇಕಿದೆ ಎಂದರು .

2013ರಲ್ಲಿ ಜ್ಞಾನಿಚಂದ್ ಎಂಬುವವರು ಸುಪ್ರೀಂಕೋರ್ಟ್‌ಗೆ ಆಂಧ್ರದ ಪರವಾಗಿ ಅರ್ಜಿ ಹಾಕಿದ್ದರು. ಅಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು‌ ಹೇಳಿದ್ದರು ಆಗ ಪಾಲಿಸದ ಆದೇಶವನ್ನು ಪಾಲಿಸು ಆಗದೇ ಇರುವುದು ನ್ಯಾಯಾಂಗ ನಿಂದನೆ ಆಗಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು.ಇದನ್ನೇ ಉದಾಹರಣೆ ತೆಗೆದುಕೊಂಡು ರಾಜ್ಯ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕುತಮಿಳುನಾಡಿನ ಅಧಿಕಾರಿಗಳು ದಾಖಲೆ ಸಮೇತ ಸಭೆಗೆ ಹೋಗ್ತಾರೆ.ನಮ್ಮವರು ವರ್ಚುಲ್ ಮೀಟಿಂಗ್‌ನಲ್ಲಿ ಕೂರುತ್ತಾರೆ ಎಂದರು.ಕಾವೇರಿ ನೀರು ಬಿಟ್ಟ ನಿರ್ಧಾರ ವಿರೋಧಿಸಿ ಮಂಡ್ಯ – ಮದ್ದೂರು ಬಂದ್ ಯಶಸ್ವಿ

ತಮಿಳುನಾಡಿನಲ್ಲಿ ಅಧಿಕ ಪ್ರಮಾಣದಲ್ಲಿ ಕೃಷಿ ಭೂಮಿ ವಿಸ್ತಾರ ಮಾಡಿಕೊಂಡಿದೆ.ಇದು ಕಾನೂನು‌ ಬಾಹಿರವಾಗಿದೆ.ಈ ವಿಚಾರವನ್ನು ನಮ್ಮ ಅಧಿಕಾರಿಗಳು ಪ್ರಶ್ನೆಯೇ ಮಾಡಿಲ್ಲ.2007ರಲ್ಲಿ ಅಂತಿಮ ತೀರ್ಪು ನೀಡಿದ್ದರು.ಆಗ ನಾನು ಸಿಎಂ ಆಗಿದ್ದೆ.ಆಗ ನಾನು ಹೆಚ್ಚುವರಿ ನೀರು ಬೇಕು ಅಂತಾ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿ, ನಮಗೆ 14.5 ಟಿಎಂಸಿ ಹೆಚ್ಚುವರಿ ನೀರು ಕೊಟ್ಟರು. ಅಲ್ಲದೇ ಕೋರ್ಟ್ ಕೂಡ ಪ್ರಾಧಿಕಾರದ ಮುಂದೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿದ್ದರು ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!