ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯು ಶ್ರಾದ್ಧ ಕಾರ್ಯ, ಪಿಂಡ ಪ್ರದಾನ, ತಿಲತರ್ಪಣ ಹೆಸರುವಾಸಿಯಾದ ತಾಣ. ಅಲ್ಲದೇ ಕರ್ನಾಟಕದ ಜೀವನದಿಯಾದ ಕಾವೇರಿಯ ತೀರವೂ ಹೌದು.
ಇಂತಹ ಪವಿತ್ರ ತಾಣದಲ್ಲಿ ಈಗ ವಾಮಾಚಾರ, ಪ್ರಾಣಿ ಬಲಿಯಂತಹ ಮೂಢನಂಬಿಕೆಯ ಆಚರಣೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಇದರ ಬಗ್ಗೆ ಗೊತ್ತಿರುವ ಪುರಸಭೆ, ತಾಲೂಕು ಆಡಳಿತ, ಜಿಲ್ಲಾಡಳಿತ ಎಲ್ಲವೂ ಜಾಣ ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ, ಅಮವಾಸ್ಯೆ, ಹುಣ್ಣಿಮೆಯ ದಿನಗಳಂದೇ ಇಲ್ಲಿ ವಾಮಾಚಾರ ಯಥೇಚ್ಛವಾಗಿ ನಡೆಯುತ್ತದೆ. ಅದೂ ಸಹ ಹಗಲಲ್ಲೇ. ಪೂಜೆ, ಪವಿತ್ರಕಾರ್ಯಗಳ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುತ್ತಿರುವ ದುಷ್ಕರ್ಮಿಗಳು ಹಂದಿ, ಕೋಳಿಗಳ ಬಲಿಯನ್ನು ನೀಡುತ್ತಿದ್ದಾರೆ. ಇದರಿಂದ ಪಶ್ಚಿಮ ವಾಹಿನಿಯ ಪವಿತ್ರ ಸ್ಥಳ ಈಗ ಅಪವಿತ್ರವಾಗುತ್ತಿದೆ. ಇದರ ಬಗ್ಗೆ ಯಾರಾದರೂ ಸ್ಥಳೀಯರು ಪ್ರಶ್ನೆ ಮಾಡಿದರೆ ಅವರ ಮೇಲೆ ಹಲ್ಲೆಯನ್ನು ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.
ಇನ್ನಾದರೂ ಸ್ಥಳಿಯ ಆಡಳಿತಗಳು ಎಚ್ಚೆತ್ತು ಇಂಥಹ ದುಷ್ಕೃತ್ಯಗಳ ಬಗ್ಗೆ ಜಠಣ ಕ್ರಮ ಕೈಗೊಳ್ಳಬೇಕಾಗಿದೆ.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು