December 22, 2024

Newsnap Kannada

The World at your finger tips!

ctr

Image Source: google / picture credits: bangaloremirror.indiatimes.com

64 ಸಾಧಕರಿಗೆ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟ

Spread the love

ಕಳೆದ ಮೂರು ವರ್ಷಗಳಿಂದ ಕಾರಣಾಂತರಗಳಿಂದ ಪ್ರಕಟವಾಗದೆ ಉಳಿದಿದ್ದ ರಾಜ್ಯ ಮಟ್ಟದ ಏಕಲವ್ಯ, ಜೀವಮಾನ ಸಾಧನೆ ಹಾಗೂ ಕ್ರೀಡಾ ರತ್ನ ಪ್ರಶಸ್ತಿಯ ಪಟ್ಟಿಯನ್ನ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಿದ್ದಾರೆ.

2017 ರಿಂದ 2019ರ ವರೆಗಿನ ಮೂರು ವರ್ಷದ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಕ್ರಿಕೆಟ್ ಆಟಗಾರರಾದ ಕೆ.ಎಲ್.ರಾಹುಲ್, ಮಯಾಂಕಾ ಅಗರ್ವಾಲ್, ಮಹಿಳಾ ಕ್ರಿಕೇಟರ್ ವೇದಾ ಕೃಷ್ಣ ಮೂರ್ತಿ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸಾಧನೆಗೈದ ಸುಮಾರು 64 ಸಾಧಕರ ಪ್ರಶಸ್ತಿಯ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಮಂಡ್ಯ, ಹಳಿಯಾಳ, ಮಂಗಳೂರು, ತುಮಕೂರು ಹಾಗೂ ಬೀದರ್ ನ ಕ್ರೀಡಾ ಸಂಸ್ಥೆಗಳನ್ನು ಕ್ರೀಡಾ ಪೋಷಕ ಸಂಸ್ಥೆಗಳೆಂದು ಗುರುತಿಸಿ, ಎಲ್ಲರಿಗೂ ಶುಭ ಹಾರೈಸಿದ್ದಾರೆ.

2017 ನೇ ಸಾಲಿನ ಏಕಲವ್ಯ ಪ್ರಶಸ್ತಿ ಆಯ್ಕೆಯಾದ ಸಾಧಕರು
1)ದಿನಾ ಜಾರ್ಜ್ ಎಸ್, ಆಥ್ಲೆಟಿಕ್
2)ಮಿಥುನಾ, ಬ್ಯಾಡ್ಮಿಂಟನ್
3)ಅವಿನಾಶ್ ಮಣಿ, ಈಜು
4)ಅರ್ಜುನ್ ಹಲ್ಕುರ್ಕಿ, ಕುಸ್ತಿ
5)ಅನಿಲ್ ಕುಮಾರ್ ಬಿ.ಕೆ, ಬಾಸ್ಕೆಟ್ ಬಾಲ್
6)ಉಷಾರಾಣಿ ಎನ್, ಕಬ್ಬಡ್ಡಿ
7)ಖುಷಿ ವಿ, ಟೇಬಲ್ ಟೆನ್ನಿಸ್
8)ಎಂ.ಎನ್.ಪೊನ್ನಮ್ಮ ,ಹಾಕಿ
9)ವಿನಾಯಕ್ ರೋಖಡೆ, ವಾಲಿಬಾಲ್
10) ಎಂ.ದೀಪಾ, ರೋಯಿಂಗ್
11)ರಾಜು ಅಡಿವೆಪ್ಪಾ ಭಾಟಿ, ಸೈಕ್ಲಿಂಗ್
12) ವರ್ಷಾ ಎಸ್, ಸ್ನೊಕರ್
13)ತೇಜಸ್ ಕೆ, ಶೂಟಿಂಗ್
14)ಶೇಖರ್ ವೀರಾಸ್ವಾಮಿ, ಟೆನ್ನಿಸ್ (ಪ್ಯಾರಾ)

2017 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ಎಂ.ಫ್ರೆಡ್ರಿಕ್ಸ್, ಹಾಕಿ
2)ಡಾ//ಪಟೇಲ್ ಮೊಹಮದ್ ಇಲಿಯಾಸ್, ವಾಲಿಬಾಲ್

2017 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ವೀಣಾ ಎಂ, ಖೋ ಖೋ
2)ಕೌಸಲ್ಯ ಕೆ.ಎಸ್, ಕಬ್ಬಡ್ಡಿ
3)ಜಯಲಕ್ಷ್ಮೀ ಜಿ, ಬಾಲ್ ಬ್ಯಾಡ್ಮಿಂಟನ್
4)ಅನುಶ್ರೀ ಹೆಚ್ ಎಸ್, ಕುಸ್ತಿ
5)ರಂಜಿತ ಎಂ, ಥ್ರೋಬಾಲ್
6)ಭೀಮಪ್ಪ ಹೆಡಪದ, ಮಲ್ಲಕಂಬ
7)ಮಹೇಶ್ ಆರ್ ಎರೆಮನಿ, ಆಟ್ಯಾ ಪಾಟ್ಯಾ
8)ಚಂದ್ರಶೇಖರ ಹೆಚ್ ಕಲ್ಲಹೊಲದ, ಗುಂಡು ಎತ್ತುವುದು
9)ಗೋಪಾಲಕೃಷ್ಣ ಪ್ರಭು,  ಕಂಬಳ
10)ಶ್ರೀನಿವಾಸ ಗೌಡ, ಕಂಬಳ

2018 ನೇ ಸಾಲಿನ ಏಕಲವ್ಯ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ವಿಜಯಕುಮಾರಿ ಜಿ.ಕೆ, ಆಥ್ಲೆಟಿಕ್
2)ಬಾಂಧವ್ಯ ಹೆಚ್ ಎಂ,  ಬಾಸ್ಕೆಟ್ಬಾಲ್
3)ಕೆ.ಎಲ್.ರಾಹುಲ್, ಕ್ರಿಕೆಟ್
4)ಮೇಘಾ ಗೂಗಾಡ್ ಸೈಕ್ಲಿಂಗ್
5)ಫೌವಾದ್ ಮಿರ್ಜಾ, ಈಕ್ವೆಸ್ಟ್ರಿಯನ್
6)ನಿಕ್ಕಿನ್ ತಿಮ್ಮಯ್ಯ, ಹಾಕಿ
7)ಗೀತಾ ದಾನಪ್ಪಗೊಳ್, ಜುಡೋ
8)ಶ್ರೀಹರಿ ನಟರಾಜ್, ಈಜು
9)ಶಕೀನ ಖಾತೂನ್, ಪ್ಯಾರಾ ಪವರ್ ಲಿಫ್ಟಿಂಗ್

2018 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ಸಿ.ಎ.ಕರುಂಬಯ್ಯ,  ಹಾಕಿ
2)ಮಂಜುನಾಥ್, ಆರ್ ಕಬ್ಬಡ್ಡಿ

2018 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ಸಂಪತ್  ನಾಗಪ್ಪ ಯೆರಗಟ್ಟಿ,  ಅಟ್ಯಾ ಪಟ್ಯಾ
2)ಸುರೇಶ್ ಶೆಟ್ಟಿ, ಕಂಬಳ
3)ಶಿವಕುಮಾರ್ ಹೆಚ್.ಎಸ್. ಖೋ ಖೋ
4)ಕಿರಣ್ ಕುಮಾರ್ ಐ, ಟೆನ್ನಿಕ್ವಾಯಿಟ್
5)ಮಲ್ಲಪ್ಪಗೌಡ ಪಾಟೀಲ್, ಕುಸ್ತಿ
6)ಯಮನಪ್ಪ ಮಾಯಪ್ಪ ಕಲ್ಲೋಳಿ, ಮಲ್ಲಕಂಬ
7)ಲಾವಣ್ಯ ಬಿ.ಡಿ., ಬಾಲ್ ಬ್ಯಾಡ್ಮಿಂಟನ್

2019 ನೇ ಸಾಲಿನ ಏಕಲವ್ಯ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ಅಭಿನಯಶೆಟ್ಟಿ, ಅಥ್ಲೆಟಿಕ್ಸ್
2)ವೇದಾ ಕೃಷ್ಣಮೂರ್ತಿ, ಕ್ರೀಡೆ
3)ವೆಂಕಪ್ಪ ಕೆಂಗಲಗುತ್ತಿ, ಸೈಕ್ಲಿಂಗ್
4)ಪುಲಿಂದ ಲೋಕೇಶ್ ತಿಮ್ಮಣ್ಣ,  ಹಾಕಿ
5)ಖುಷಿ ದಿನೇಶ್, ಈಜು
6)ಮಯಾಂಕ್ ಅಗರ್ ವಾಲ್ , ಕ್ರಿಕೆಟ್
7)ಪುನೀತ್ ನಂದಕುಮಾರ್, ಪ್ಯಾರಾ ಈಜು
8)ಅಭಿಷೇಕ್ ಎನ್.ಶೆಟ್ಟಿ , ಅಥ್ಲೆಟಿಕ್ಸ್

2019 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಗೆ ಆಯ್ಕೆಯಾದ ಸಾಧಕರು

1)ಶಾಂತಾ ರಂಗಸ್ವಾಮಿ,  ಕ್ರಿಕೆಟ್
2)ಸಂಜೀವ್ ಆರ್.ಕನಕ, ಖೋ ಖೋ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳ ವಿವರ :

1)2018-19 – ಸ್ವರ್ಣ ಫುಟ್ ಬಾಲ್ ಅಭಿವೃದ್ಧಿ ಸಂಸ್ಥೆ, ಮಂಡ್ಯ
2)ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ
3)2019-20 – ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು
4)2020-21 – ಸಿದ್ಧ ಗಂಗಾ ಮಠ ಸಂಸ್ಥೆ , ತುಮಕೂರು
5)ಮಾಣಿಕ ಪ್ರಭು ಸ್ಪೋರ್ಟ್ಸ್ಅಕಾಡೆಮೆ, ಮಾಣಿಕ ನಗರ, ಬೀದರ್

Copyright © All rights reserved Newsnap | Newsever by AF themes.
error: Content is protected !!