Karnataka Budget – 2022 ಕೃಷಿಗೆ 33,700 ಕೋಟಿ ರು ಮೀಸಲಿಟ್ಟ ಸಿಎಂ ಬೊಮ್ಮಾಯಿ

Team Newsnap
2 Min Read
7th Pay Commission for State Govt Employees: CM Notice for Interim Report in March ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ: ಮಾರ್ಚ್ ನಲ್ಲಿ ಮಧ್ಯಂತರ ವರದಿಗೆ ಸಿಎಂ ಸೂಚನೆ

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಒಟ್ಟು 33,700 ಕೋಟಿ ರುಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೀಸಲಿಟ್ಟಿದ್ದಾರೆ.

ಈ ವೇಳೆ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣಕಾಸು ಆಯವ್ಯಯದ ಬಗ್ಗೆ ಮಾಹಿತಿ ನೀಡಿದರು.

ರೈತಶಕ್ತಿ ಯೋಜನೆ

‘ರೈತ ಶಕ್ತಿ’ ಎಂಬ ನೂತನ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ, ಈ ಯೋಜನೆಯ ಸಾಕಾರಕ್ಕಾಗಿ 600 ಕೋಟಿ ಅನುದಾನವನ್ನ ಮೀಸಲಿಟ್ಟಿದ್ದಾರೆ.

ಈ ಯೋಜನೆಯಡಿ ಪ್ರತಿ ಎಕರೆಗೆ 250 ರೂಪಾಯಿ ಅಂತೆ ಡಿಸೇಲ್ ಸಹಾಯ ಧನ ನೀಡಲಾಗುತ್ತದೆ.

ಬಜೆಟ್ ಮುಖ್ಯ ಅಂಶಗಳು

  • ಮೇಕೆದಾಟು ಯೋಜನೆಗೆ 1000 ಕೋಟಿ ರು ಮೀಸಲು
  • ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿಯಲ್ಲಿನ 50 ಲಕ್ಷಕ್ಕೂ ಹೆಚ್ಚಿನ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 1978 ಕೋಟಿ ರೂಪಾಯಿ ಅನುದಾನ
  • ಕೆಪೆಕ್ (KAPPEC) ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಾಮಾನ್ಯ ಕೇಂದ್ರಗಳನ್ನ ಅಭಿವೃದ್ಧಿಪಡಿಸಿ ಕೊಯ್ಲಿನೋತ್ತರ ನಿರ್ಣಯಗಳನ್ನ ಕೈಗೊಂಡು ಅವುಗಳ ಉತ್ಪನ್ನಗಳನ್ನ ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂಪಾಯಿಗಳಲ್ಲಿ ಯೋಜನೆ ರೂಪಿಸಲು ನಿರ್ಧಾರ
  • ರಾಜ್ಯದ 57 ತಾಲೂಕುಗಳ ವ್ಯಾಪ್ತಿಯ 2.75 ಲಕ್ಷ ಹೆಕ್ಟೇರ್​ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 642 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿಗೆ ಪ್ಲಾನ್
  • ಒಕ್ಕಲಿಗರ ಹಾಗೂ ವೀರವೈಶರ ಅಭಿವೃದ್ದಿ ನಿಗಮಕ್ಕೆ ತಲಾ 100 ಕೋಟಿ ರು ಮೀಸಲು
  • ಬಡವರಿಗೆ 5 ಕೆಜಿ ಅಕ್ಕಿಯ ಜೊತೆ ಒಂದು ಕೆ ಜಿ ರಾಗಿ ಅಥವಾ ಜೋಳ
karnataka budget 2022
  • ಕಾಶಿ ಯಾತ್ರೆಗೆ ಧನ ಸಹಾಯಕ್ಕಾಗಿ
    ರಾಜ್ಯದ ಕಾಶಿ ಯಾತ್ರಾರ್ಥಿಗಳಿಗೆ 30 ಸಾವಿರ ಭಕ್ತರಿಗೆ 5 ಸಾವಿರ ರೂ. ಸಹಾಯ ಧನ. ಪುಣ್ಯ ಕೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಕೆಎಸ್‌ಟಿಡಿಸಿ ವತಿಯಿಂದ ಪ್ರವಾಸ ಕೈಗೊಳ್ಳಲು ಕ್ರಮ
  • ನಾರಾಯಣ ಗುರು ಟ್ಯಾಬ್ಲೋ ವಿವಾದಕ್ಕೆ ಮದ್ದು ಅರೆದ ರಾಜ್ಯ ಸರ್ಕಾರ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭ
  • ಎಲ್ಲಾ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಮಿನಿ ಆಹಾರ ಸ್ಥಾಪನೆಗೆ ನಿರ್ಧಾರ
  • ಆಶಾ ಕಾರ್ಯ ಕತೆ೯ಯರಿಗೆ 1 ಸಾವಿರ ರು ಗೌವರ ಧನ ಏರಿಕೆ

ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು ತಗುಲಿರುವ ಘಟನೆ ಕೀವ್ ನಲ್ಲಿ ಜರುಗಿದೆ.

ಕೇಂದ್ರ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚುವ ಜನರಲ್ ವಿ ಕೆ ಸಿಂಗ್ ಪೋಲೆಂಡ್ ನ ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಖಚಿತ ಪಡಿಸಿದರು.

ಈ ದಾಳಿ ಗುಂಡೇಟು ಬಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.

Share This Article
Leave a comment