ಕರ್ನಾಟಕ-ಆಂಧ್ರ ಗಡಿ ಸರ್ವೇ ಕಾರ್ಯ ಮತ್ತೆ ಆರಂಭ – ರೆಡ್ಡಿಗೆ ಸಂಕಷ್ಟ?

Team Newsnap
1 Min Read

ಇಂದಿನಿಂದ ಕರ್ನಾಟಕ-ಆಂಧ್ರ ಗಡಿ ಸರ್ವೇ ಕಾರ್ಯ ಮತ್ತೆ ಆರಂಭವಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತುಮಟಿ- ವಿಠಲಾಪುರ ಹಾಗೂ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಕಂಪನಿ ಮಧ್ಯೆ ಇರುವ ಗಡಿ ಗುರುತು ನಾಶಪಡಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಇಂದಿನಿಂದ ಗಡಿ ಸರ್ವೇ ಕಾರ್ಯ ಪುನರಾರಂಭಗೊಂಡಿದೆ.

ಈ ಆರೋಪ ಸಾಬೀತಾದ್ರೆ ರೆಡ್ಡಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸರ್ವೇ ಆಫ್ ಇಂಡಿಯಾ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯದ ಕಂದಾಯ ಅಧಿಕಾರಿಗಳಿಂದ ಸರ್ವೇ ನಡೆಸುತ್ತಿದ್ದಾರೆ.

ಈ ಹಿಂದೆಯೂ ಸರ್ವೇ ನಡೆಸಿದ್ದರೂ ಗಡಿ ಕಾರ್ಯ ಸಮರ್ಪಕವಾಗಿಲ್ಲ, ಅಧಿಕಾರಿಗಳು ಒತ್ತಡಕ್ಕೆ ಮಣಿದು ಗಡಿ ಗುರುತು ಸರಿಯಾಗಿ ಮಾಡಿಲ್ಲ ದೂರು ಕೇಳಿಬಂದಿತ್ತು. ಈ ಹಿನ್ನಲೆ ಮತ್ತೆ ಕರ್ನಾಟಕ-ಆಂಧ್ರ ಗಡಿ ಗುರುತಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Share This Article
Leave a comment