‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎಂಬ ತೆಲುಗು ಧಾರಾವಾಹಿ ಸೆಟ್ನಲ್ಲಿ ಈ ಘಟನೆ ಜರುಗಿದೆ.ಇದನ್ನು ಓದಿ –ಶಿವಸೇನಾ ಸಂಸದ ಸಂಜಯ್ ರಾವತ್ ಬಂಧಿಸಿದ ED ಅಧಿಕಾರಿಗಳು
ಧಾರಾವಾಹಿ ತಂತ್ರಜ್ಞಾನರು ನಟ ಚಂದನ್ ಮೇಲೆ ಹಲ್ಲೆ ಮಾಡಿ ಕಪಾಳಮೋಕ್ಷ ಮಾಡಿದ್ದಾರೆ. ಕ್ಯಾಮೆರಾ ಅಸಿಸ್ಟೆಂಟ್ಗೆ ಮೇಲೆ ಕೈ ಮಾಡಿದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ತಾಯಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ನಟ ಚಂದನ್ ಟೆಶ್ಶನ್ನಲ್ಲಿ ನಿದ್ದೆ ಇಲ್ಲದೇ ನಟ ಚಂದನ್ ರೆಸ್ಟ್ ಮಾಡ್ತಿದ್ದರಂತೆ. ಆ ವೇಳೆ ಸೆಟ್ ಬಾಯ್ ಅವರನ್ನ ಶೂಟ್ಗೆ ಕರೆದಿದ್ದನಂತೆ.
ಈ ವೇಳೆ ಸೆಟ್ ಬಾಯ್ ಜೋರಾಗಿ ಏಕವಚನದಲ್ಲಿ ಕರೆದ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಕೈ ಕೈ ಮೀಲಾಯಿಸೋ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ.
ನಂತರ ಸೆಟ್ ಬಾಯ್ ಸ್ಥಳೀಯ ಟೆಕ್ನಿಶಿಯನ್ ಸಂಘದ ಸದಸ್ಯರನ್ನು ಕರೆಯಿಸಿ ಚಂದನ್ಗೆ ಮುತ್ತಿಗೆ ಹಾಕಿ ಜೋರು ಗಲಾಟೆ ಮಾಡಿದ್ದಾರೆ. ಈ ನಡುವೆ ಟೆಕ್ನಿಶಿಯನ್ ಒಬ್ಬ ಚಂದನ್ ಅವರಿಗೆ ಕಪಾಳಮೋಕ್ಷ ಮಾಡಿರೋದು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ನಟ ಚಂದನ್, ಇದೊಂದು ಸಣ್ಣ ಘಟನೆ. ನಾನು ಇದನ್ನು ದೊಡ್ಡದು ಮಾಡುವ ಯೋಚನೆ ಇರಲಿಲ್ಲ.
ಆದರೆ ಬೇಕು ಅಂತ ಈ ರೀತಿ ಮಾಡಿದ್ದಾರೆ ಎಂದಿದ್ದಾರೆದೂರಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು