December 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 25

Spread the love

ಭಾವನ ಲೋಕದ ರಾಯಭಾರಿ ಕವಿ ಜಯಂತ್ ಕಾಯ್ಕಿಣಿ

jayanth1

ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ ಮತ್ತು ಭಾವಲೋಕದ ರಾಯಭಾರಿ ಕವಿ ಜಯಂತ್ ಕಾಯ್ಕಿಣಿ. ತಮ್ಮ ಸ್ನಿಗ್ಧ- ಶುದ್ಧ ಕವಿತೆಗೆಳ ಮೂಲಕ ಕನ್ನಡ ಜನೆತೆಯ ಹೃದಯ ತಪ್ತಗೊಳಿಸಿದವರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಯ್ಕಿಣಿಯವರು ಕೇವಲ ಕವಿಯಾಗಿರದೇ ಲೇಖಕರಾಗಿಯೂ ಪ್ರಸ್ತುತರು.

ಬಾಲ್ಯ-ವೃತ್ತಿಜೀವನ

1955 ಕರ್ನಾಟಕ ಕರಾವಳಿ ತೀರ ಗೋಕರ್ಣದಲ್ಲಿ ಜನಿಸಿದರು. ತಂದೆ ಗೌರೀಶ್ ಕಾಯ್ಕಿಣಿ ಶಿಕ್ಷಕರು ಮತ್ತು ಖ್ಯಾತ ಬರಹಗಾರರು,ತಾಯಿ ಶಾಂತಾ ಸಮಾಜಸೇವಕಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಿಂದ ಜೀವ ರಸಾಯನಿಕ ಶಾಸ್ತ್ರದಲ್ಲಿ ಪದವಿ ಪಡೆದ ಇವರು ಬಯೋ ಕೆಮಿಸ್ಟ್ ಆಗಿ ಬಾಂಬೆಯಲ್ಲಿ ಉದ್ಯೋಗ ಆರಂಭಿಸಿದರು.ವಿಕ್ಸ್ ಪೇಪರ್ ಹಬ್ ಪ್ರಾಡಕ್ಟಗಳ ಕ್ವಾಲಿಟಿ ಕಂಟ್ರೋಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಸುಮಾರು 23 ವರ್ಷ ಬಾಂಬೆಯಲ್ಲಿ ನೆಲೆಸಿದ್ದ ಕಾಯ್ಕಿಣಿರವರು 2000 ರಲ್ಲಿ ಪತ್ನಿಯ ಸಲಹೆಯಂತೆ ಬೆಂಗಳೂರಿಗೆ ಬಂದು ನೆಲೆಸಿದರು.

ಸಾಹಿತಿ

1974 ರಲ್ಲಿ ಪ್ರಕಟಿತಗೊಂಡ ರಂಗದಿಂದೊಷ್ಟು ದೂರ' ಕವನ ಮಾಲಿಕೆಯಿಂದ ಇವರ ಸಾಹಿತ್ಯ ಕೃಷಿ ಆರಂಭವಾಯಿತು. ಆಗ ಕೇವಲ 19 ವರ್ಷದ ಯುವಕನಾಗಿದ್ದ ಕಾಯ್ಕಿಣಿಯವರು ತಮ್ಮ ಮೊದಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಕೆಲವು ಕವನ-ಗುಚ್ಚಗಳ ನಂತರತೆರೆದಷ್ಟೇ ದೂರ’ ಎಂಬ ಕಥಾ-ಸಂಕಲನ ಬರೆದರು. ಕಥಾ-ಪ್ರಪಂಚ, ನಾಟಕ ಮತ್ತು ಗೀತ ಸಾಹಿತ್ಯ ಪ್ರಕಾರದಲ್ಲಿ ಹೆಚ್ಚಾಗಿ ಕೃಷಿ ಮಾಡಿರುವ ಇವರು ನಾಲ್ಕು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

jayanth kaikini

ಜಯಂತರವರ ಸಾಹಿತ್ಯದಲ್ಲಿ ಒಂದು ಸೂಕ್ಷ್ಮ ಭಾವಲೋಕ, ಬದುಕಿನೆಡೆಗೆ ವಾಸ್ತವದ ದೃಷ್ಟಿಕೋನ ಹೇರಳವಾಗಿದೆ.ಕಾಯ್ಕಿಣಿಯವರ ಕಾವ್ಯ ಯಾವುದೇ ಪ್ರಚಲಿತ ತತ್ವ- ವಿಚಾರಧಾರೆಗಳಾಚೆ ನೈಜ ಬದುಕಿನ ಹಂದರವನ್ನು ಸೃಷ್ಟಿಸುತ್ತವೆ. ದಿನಿನಿತ್ಯದ ಆಡು-ಭಾಷೆಯಲ್ಲಿಯೇ ಹಾಸ್ಯ ಮತ್ತು ಮೃದು ವ್ಯಂಗಭರಿತ ಶೈಲಿಯಲ್ಲಿರುವ ಇವರ ಕಾವ್ಯಗಳು ಹೃದಯಕ್ಕೆ ಆಪ್ತ.

ಸಿನಿ ಪ್ರಪಂಚ

21205342

2003 ರಲ್ಲಿ ತೆರೆಕಂಡ ಚಿಗುರಿದ ಕನಸು' ಚಿತ್ರದ ಮೂಲಕ ಚಿತ್ರಗೀತೆಗಳ ಸಾಹಿತ್ಯದಲ್ಲಿ ತೊಡಗಿಸಿಕೊಂಡರು.2006 ರಲ್ಲಿ ತೆರೆ ಕಂಡ ಮುಂಗಾರು ಮಳೆ’ ಚಿತ್ರ ಇವರ ಮಧುರ ಗೀತೆಗಳ ಇಂಪನ್ನು ಕರ್ನಾಟಕದಾದ್ಯಂತ ಪಸುರಿಸಿತು. ನಂತರ ಬಂದ ಮಿಲನ',ಈ ಬಂಧನ’,ಗೆಳೆಯ’`ಅರಮನೆ’ ಮುಂತಾದ ಚಿತ್ರಗೀತೆಗಳು ಕನ್ನಡ ಯುವಜನತೆಯನ್ನು ತಪ್ತವಾಗಿಸಿದವು. ಆಧುನಿಕ ಶೈಲಿಯಲ್ಲಿ ಮಧುರ ಶಬ್ಧಗಳ ಮೂಲಕ ಭಾವಪ್ರಪಂಚ ಕಟ್ಟುವ ಕಾಯ್ಕಿಣಿಯವರ ಗೀತೆಗಳಿಗೆ ಕನ್ನಡ ಸಿನಿಲೋಕ ಮೆಚ್ಚುಗೆಯ ಜೈಕಾರ ಹಾಕುತ್ತಿದೆ.

ಈ ಟಿವಿ ಕನ್ನಡದ ರಸ-ಋಷಿಗೆ ನಮಸ್ಕಾರ',ಎದೆ ತುಂಬಿ ಹಾಡಿದನು’ ಮುಂತಾದ ಕಾರ್ಯಕ್ರಮಗಳ ನಿರೂಪಕರಾಗಿ,ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಭಾವಕವಿಯ ಪ್ರೇಮಕಾವ್ಯ

jayanth2

ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದಾಗ ಸಹೋದ್ಯೋಗಿ ಸ್ಮಿತಾರ ಪರಿಚಯವಾಯಿತು. ಪರಸ್ಪರ ಅರ್ಥವಾಗದ ಭಾಷಾಹಿನ್ನಲೆಯಿಂದ ಬಂದರೂ ನಿಧಾನವಾಗಿ ಇಬ್ಬರ ಹೃದಯದಲ್ಲಿ ಪ್ರೇಮಾಂಕುರವಾಯಿತು.ಮದುವೆಯ ನಂತರ ಕಾಯ್ಕಿಣಿಯವರೇ ಮುಂದೆ ನಿಂತ ತಮ್ಮ ಮುದ್ದಿನ ಮಡದಿಗೆ ಅಡುಗೆ ಕಲಿಸುತ್ತಿದ್ದರು. ಕಾಯ್ಕಿಣಿಯವರ ಪುತ್ರಿ ಸೃಜನಾ ಓಡಿಸ್ಸಿ ನೃತ್ಯದಲ್ಲಿ ಪರಿಣಿತಿ ಹೊಂದಿ ಅಂತರಾಷ್ಟ್ರೀಯ ಮನ್ನಣೆ ಕೂಡ ಪಡೆದಿದ್ದಾರೆ. ಪುತ್ರ ರಿತ್ವಿಕ್ ಮಲ್ಟಿಮೀಡಿಯಾ ಅರ್ಟಿಸ್ಟ್ ಆಗಿ ಪ್ರಸ್ತುತರು.

ಪ್ರಮುಖ ಕೃತಿಗಳು

  • ರಂಗದಿಂದೊಷ್ಟು ದೂರ
  • ಕೋಟಿತೀರ್ಥ
  • ತೆರೆದಷ್ಟು ಬಾಗಿಲು
  • ಬೊಗಸೆಯಲ್ಲಿ ಮಳೆ
  • ಶಬ್ಧತೀರ
  • ತೂಫಾನ್ ಮೇಲ್
  • ಬಣ್ಣದ ಕಾಲು
  • ನೀಲಿಮಣೆ…ಇತ್ಯಾದಿ

ಸುಪ್ರಿಯಾ ಚಕ್ಕೆರೆ

Copyright © All rights reserved Newsnap | Newsever by AF themes.
error: Content is protected !!