Editorial

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 8

ಮಲೆ ದೇಗುಲಗಳ ಪ್ರಿಯ ಕವಿ ಪುತಿನ

ಹಗುರಾಗಿಹ ಮೈ
ಕೆಸರಿಲ್ಲದ ಮನ
ಹಂಗಿಲ್ಲದ ಬದುಕು
ಕೇಡಿಲ್ಲದ ನುಡಿ
ಕೇಡೆಣಿಸದ ನಡೆ
ಸಾಕಿವು
ಇಹಕೂ, ಪರಕೂ
ಮೇಲೇನಿದೆ ಇದಕೂ ?

ಪುತಿನ
ಪುತಿನ

ಬದುಕಿನ ಸರಳ ಸೂತ್ರವನ್ನು ಮನ ಮುಟ್ಟುವಂತೆ ಹೇಳಿದ ಪುತಿನ ಕನ್ನಡದ ಭಕ್ತ, ಜಿಜ್ಞಾಸು, ಚಿಂತನಾಶೀಲ ಕವಿಯೂ ಹೌದು.
ಕೃಷ್ಣ, ಅವನ ಕೊಳಲು, ಕೊಳಲಗಾನ ಅವರ ಬದುಕಿನ ಅವಿಭಾಜ್ಯ ಅಂಗ ವಾಗಿತ್ತು. ಆ ಕೃಷ್ಣ ನ ಇಂದಿನ ರೂಪವಾಗಿರುವ ಚಲುವನಾರಾಯಣನು ಪುತಿನ ಅಂತರಂಗದ ಆರಾಧ್ಯದೈವ ಎನ್ನುವುದು ಸತ್ಯ ಸಂಗತಿ.

ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ.ವೈರಮುಡಿಯಿಂದಾಗಿ ವಿಶ್ವಾದ್ಯಂತ ಈ ಹೆಸರು ಚಿರಪರಿಚಿತ. ಮೇಲುಕೋಟೆ ಅರ್ಥಾತ್ ಯದುಗಿರಿಯ ಹೆಸರಿನೊಂದಿಗೆ ಥಟ್ಟನೆ ನೆನಪಿಗೆ ಬರುವ ಮತ್ತೊಂದು ಹೆಸರು.ಪು.ತಿ.ನ.

ಪರೋಹಿತ ತಿರುನಾರಾಯಣ ನರಸಿಂಹಾಚಾರ್.
ಕನ್ನಡ ನಾಡಿನ ಹಿರಿಯ ಕವಿ ಚೇತನ. ನವೋದಯದ ಚಿಂತನಶೀಲ ಕವಿ. ಪರಂಪರೆ, ಆಧುನಿಕತೆ, ವೈಚಾರಿಕತೆಗಳ ಮನೋಭೂಮಿಕೆಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಕನ್ನಡ ಸೇವೆ ಮಾಡಿದ ಉದ್ಧಾಮ ಕವಿ.

ಗಾಂಭೀರ್ಯ ಶಿಸ್ತಿನ ತೇಜಸ್ಸಿನ ಮುಖ ಭಾವ ತಲೆಯಲ್ಲಿ ಟೋಪಿ, ಹಣೆಯಲ್ಲಿ ಕೆಂಪುನಾಮ ಗೌರವ ಧನ್ಯತೆ ಮೂಡಿಸುವ ಚೇತನ ನಮ್ಮ ಪು.ತಿ.ನ. ಮೇಲುಕೋಟೆಯ ಸಂಭ್ರಮದ ವೈರಮುಡಿಯ ದಿನ ಅಂದರೆ 1905 ರ ಮಾರ್ಚ 17 ರಂದು ಪುತಿನ ಜನನ.
ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಗೊರೂರಿನ ರಾಮಮ್ಮ.

ಪುತಿನ ಅವರ ಬಾಳ ಸಂಗಾತಿಯಾಗಿ ನಡೆದು ಬಂದವರು ಶೇಷಮ್ಮ. ಪುತಿನ ದಂಪತಿಗಳಿಗೆ ಎಂಟು ಜನ ಮಕ್ಕಳು.ಪುತಿನ ಅವರ ಮಾತೃಭಾಷೆ ತಮಿಳು. ಕಲಿತದ್ದು ಸಂಸ್ಕೃತ, ಇಂಗ್ಲಿಷ್, ಪ್ರೆಂಚ್. ಆದರೆ ಅವರ ಹೃದಯದ ಅಭಿವ್ಯಕ್ತಿಯ ಭಾಷೆಯಾದದ್ದು ಕನ್ನಡ. ಕನ್ನಡ ನೆಲದ ಗಾಳಿ,ನೀರು,ಗಂಧಗಳನ್ನು ಸೇವಿಸಿದ ಅವರ ಮೈಮನ ಕನ್ನಡಕ್ಕೆ ಒಲಿದಿದ್ದು ಕನ್ನಡದ ಸೌಭಾಗ್ಯವೇ ಸರಿ.

ಪುತಿನ ಅವರಿಗೆ ಕನ್ನಡದ ಬಗ್ಗೆ ಅಪಾರ ಪ್ರೀತಿ. ಅವರ ಹೃದಯ ಕನ್ನಡಕ್ಕಾಗಿ ಮಿಡಿದಿದೆ. ಕನ್ನಡವನ್ನು ಅಸಡ್ಡೆಯಿಂದ ಕಾಣುವವರಿಗೆ ಅವರು ಹೇಳಿದ್ದಾರೆ
‘ ಮೂಲಿಕೆಯರಿಯದೆ ಮಲೆಯ ತಂದ
ಮಾರುತಿಯೊಳು ಸಂಭ್ರಮಿಸುವೆ ಕಂದ
ನಿನ್ನ ಕರುಳಿನ ಕುಡಿಯೇ ನಾಳಿಗೆ
ಇಲ್ಲವಾಯಿತೆ ನಿನ್ನ ಪಾಲಿಗೆ
ಭೂತ ಹೊಕ್ಕ ತನು ಯಂತ್ರದೋಲಾಡಿ
ಏನ ಗೆಲುವೆ ತಾಯ್ನುಡಿಯನು ಕಾಡಿ?
ನಮ್ಮ ನುಡಿ ಜನರ ಕರುಳಿನ ಕುಡಿ ಅದನ್ನು ಬಾಡಿಗೆಗೆ ತರಲಾಗುವುದಿಲ್ಲ.ಬೇರೆಯ ನುಡಿ ಪರಕಾಯ ಪ್ರವೇಶ ಮಾಡಿದ ಭೂತದಂತೆ ನುಡಿಸುತ್ತದೆ.ನಿನ್ನ ಶ್ರಮ ಸಂಜೀವಿನಿ ಮೂಲಿಕೆ ತಿಳಿಯದೇ ಬೆಟ್ಟವನ್ನೇ ಹೊತ್ತು ತಂದ ಮಾರುತಿಯ ಸ್ಥಿತಿಯಂತಾಗುತ್ತದೆ’ ಎಂದು ಮರುಗಿದ್ದಾರೆ.

ಬರೀ ಕನ್ನಡ, ಕನ್ನಡ ಎಂದರೆ ಭಾಷಾಭಿವೃದ್ಧಿಯಾಗದು,ಇತರ ಎಲ್ಲಾ ಭಾಷೆಗಳ ಸಾರ ಸರ್ವಸ್ವವನ್ನು ಕನ್ನಡಕ್ಕೆ ಬರಮಾಡಿಕೊಳ್ಳಬೇಕು. ಭಾಷೆಯನ್ನು ದುರಭಿಮಾನಕ್ಕೆ ಬಳಸದೇ ಪ್ರೀತಿಸುವಂತಾಗಬೇಕು ಎಂಬುದು ಪುತಿನ ಅವರ ನಿಲುವು.

ಪುತಿನ ಅವರ ಸಾಹಿತ್ಯ ಸುನೀತ, ಭಾವಗೀತೆ, ಪ್ರಬಂಧ, ವಿಚಾರ ಸಾಹಿತ್ಯ,ಕಥೆ, ವಿಮರ್ಶೆ, ಗೀತರೂಪಕ, ನಾಟಕ.ಮೀಮಾಂಸೆ,ಮಹಾಕಾವ್ಯ ಎಲ್ಲವನ್ನೂ ಒಳಗೊಂಡಿವೆ. ಪ್ರೇಮ, ಭಕ್ತಿ, ಅಧ್ಯಾತ್ಮ,ಅಂತರ್ಮುಖಿತ್ವಗಳನ್ನು ಮೈಗೂಡಿಸಿಕೊಂಡಿದ್ದ ಪುತಿನ ಅವರ ಮೇಲೆ ಮೇಲುಕೋಟೆಯ ಪರಿಸರ ಅಗಾಧ ಪ್ರಭಾವವನ್ನು ಬೀರಿದೆ.

ಇವರು ಜೀವನದ ಜಿಗುಪ್ಸೆಯಿಂದ ಕಾವ್ಯ ಬರೆಯದೆ ದೈವಾರಾಧಕರಾಗಿ ಬರೆದಿರುವುದರಿಂದ ‘ಭಾಗವತ ಕವಿ’ ಎನಿಸಿಕೊಂಡಿದ್ದಾರೆ. ಅಹಲ್ಯೆ, ಶಬರಿ, ಕುಚೇಲ ಕೃಷ್ಣ, ಗೋಕುಲ ನಿರ್ಗಮನ, ದೋಣಿಯ ಬಿನದ,ಹಂಸ ದಮಯಂತಿ ಮತ್ತು ಇತರ ರೂಪಕಗಳು,ವಿಕಟಕವಿ ವಿಜಯ,ಶ್ರೀರಮಣಪ್ರಭ,ಶ್ರೀರಾಮ ಪಟ್ಟಾಭಿಷೇಕ, ಸತ್ಯಾಯನ ಹರಿಶ್ಚಂದ್ರ ಮುಂತಾದ ಗೀತರೂಪಕಗಳು ಇವರ ಸಾಹಿತ್ಯ -ಸಂಗೀತದ ಕುರುಹಾಗಿ ರಚಿತಗೊಂಡಿವೆ.

ಪುತಿನ ಅವರ ಪ್ರಬಂಧಗಳಿಗೆ ಮೇಲ್ಮಟ್ಟದ ಸ್ಥಾನವಿದೆ. ಗದ್ಯ ಮೋಹಕವಾಗಿದೆ. ಉಕ್ತಿ-ಶಕ್ತಿಗಳೆರಡನ್ನು ಪಡೆದಿವೆ.ಬುದ್ದಿಯ ಚಮತ್ಕಾರ, ಕಲ್ಪನೆ, ವ್ಯಂಗ್ಯಗಳನ್ನೊಂದಿದೆ. ಇವುಗಳ ರಚನಾ ಕೌಶಲ್ಯ ತಿಳುವಳಿಕೆಯನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಅವರ ರಾಮಾಚಾರಿಯ ನೆನಪು,ರಥಸಪ್ತಮಿ,ಧ್ಜಜ ರಕ್ಷಣೆ,ಈಚಲು ಮರದ ಕೆಳಗೆ,ಧೇನುಕ ಪುರಾಣ, ಯದುಗಿರಿಯ ಗೆಳೆಯರು ಮುಂತಾದವುಗಳನ್ನು ಹೆಸರಿಸಬಹುದು. ಇವರಿಗೆ ಪಂಪ ಪ್ರಶಸ್ತಿಯನ್ನು ತಂದುಕೊಟ್ಟ ಮಹಾಕಾವ್ಯ ಶ್ರೀಹರಿಚರಿತೆ.

ಇಷ್ಟೆಲ್ಲಾ ಸಾಹಿತ್ಯ ಕೃಷಿ ನಡೆಸಿರುವ ಇವರಿಗೆ ಸಂದ ಪ್ರಶಸ್ತಿಗಳು ಹಲವಾರು.1965 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,1966 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,1971 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ,1981 ರ 53 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,1991 ರಲ್ಲಿ ಪದ್ಮಶ್ರೀ ಪ್ರಶಸ್ತಿ,1994 ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಫೆಲೋಶಿಪ್,ರಾಜ್ಯೋತ್ಸವ ಪ್ರಶಸ್ತಿಗಳು,ಸಮ್ಮೇಲಳನಾದ್ಯಕ್ಷತೆಯ ಗೌರವಗಳು ಲಭಿಸಿವೆ.

93 ವರ್ಷಗಳ ತುಂಬು ಜೀವನ ನಡೆಸಿ 1998 ರ ಅಕ್ಟೋಬರ್ 13 ರಂದು ಇಹಲೋಕ ತ್ಯಜಿಸಿದರು.ಆದರೂ ಜ್ಞಾನಪೀಠ ಪ್ರಶಸ್ತಿ ದೊರೆಯದಿದ್ದುದು ಕೊರತೆಯೇ ಸರಿ.
ಯದುಗಿರಿಯ ಚಲುವನಾರಾಯಣ,ಅಲ್ಲಿನ ಕಾಡುಮೇಡು,ಮರಗಿಡಬಳ್ಳಿ, ಸೂರ್ಯೋದಯ, ಸೂರ್ಯಾಸ್ತ, ಹುಣ್ಣಿಮೆ ಇವುಗಳ ಸನ್ನಿಧಿಯಲ್ಲಿ ಕವಿಯಾದ ಪುತಿನ
ಏನ್ ಶಾಂತಿಯು,ಸೌಂದರ್ಯವು
ಯಾದವಗಿರಿ ನಭದಿ!
ಏನ್ ಮೌನವು,ನೀರವತೆಯು
ಮಲೆ ತುದಿ ದೇಗುಲದಿ.
ಈ ಶಾಂತಿಯೊಳಾಲಿಸದೋ
ಉಡುಲೋಕದ ಗಾನ;
ಸಮಶೃತಿಯ ಹೊಂದಿರುವೀ,
ತನು ಮುಚ್ಚಿಹ ಗಾನ!
ಎಂದು ‘ಯದುಗಿರಿ’ ಕವನದಲ್ಲಿ ಬಣ್ಣಿಸಿದ್ದಾರೆ.
ಮೌನ ನೀರವತೆ ಹೊಂದಿದ ಅವರ ತನು ಚಿರಶಾಂತಿ ಬಯಸಿ ಯದುಗಿರಿಯ ಒಡಲಲ್ಲಿ ಲೀನವಾಗಿದೆ.

ಪುತಿನ ಅವರು ಬದುಕಿದ್ದಾಗಲೇ ಅವರ ಸಾಹಿತ್ಯವನ್ನು ಜನಮನ ಮುಟ್ಟಿಸಲು ಸಾಧ್ಯವಾಗಿಲ್ಲ. ಮುಂದೆಯಾದರೂ ಅವರ ಗೀತರೂಪಕಗಳು,ನಾಟಕಗಳು ರಂಗಪ್ರವೇಶಿಸುವಂತೆ, ಭಾವಗೀತೆಗಳು ಬಾಯಿಗಳಲ್ಲಿ ನಲಿಯುವಂತೆ,ಅವರ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣಗಳು ನಡೆಯುವಂತೆ,ಇವರ ಮನಸ್ಸು ನಾಡಿನ ಜನರ ಮನಸ್ಸಿನಲ್ಲಿ ಬೆರೆಯುವಂತೆ,ಅವರ ಕೃತಿಗಳು ಸುಲಭವಾಗಿ ದೊರೆಯುವಂತೆ ಮಾಡಬೇಕಾಗಿದೆ. ಜೊತೆಗೆ ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಕವಿ ಪುತಿನ ಹೆಸರನ್ನು ಉದ್ಯಾನವನಕ್ಕೋ,ಪ್ರಮುಖ ರಸ್ತೆಗೋ ನಾಮಕರಣ ಮಾಡಿ ಕವಿಗೆ ಗೌರವ ಸಲ್ಲಿಸಬೇಕಾಗಿದೆ.

ಹೊಳಲು ಶ್ರೀಧರ್,
ಮಂಡ್ಯ
Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024