ಹೃದಯಾಘಾತದಿಂದ ಕನ್ನಡದ ನಟ, ನಿರ್ದೇಶಕ ನಿತಿನ್ ಗೋಪಿ ನಿಧನ

Team Newsnap
1 Min Read
Kannada actor and director Nitin Gopi passed away due to heart attack ಹೃದಯಾಘಾತದಿಂದ ಕನ್ನಡದ ನಟ, ನಿರ್ದೇಶಕ ನಿತಿನ್ ಗೋಪಿ ನಿಧನ

ಬೆಂಗಳೂರು :ಹೃದಯಾಘಾತದಿಂದ ನಟ ಹಾಗೂ ನಿರ್ದೇಶಕ ನಿತಿನ್ ಗೋಪಿ(30) ನಿಧನರಾಗಿದ್ದಾರೆ.

ನಟ ವಿಷ್ಣುವರ್ಧನ್ ನಟನೆಯ ಹಲೋ ಡ್ಯಾಡಿ ಸಿನಿಮಾದಲ್ಲಿ ಬಾಲ ನಟನಾಗಿ ನಟಿಸಿದ್ದ ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಂತ ನಟ ನಿರ್ದೇಶಕ ನಿತಿನ್ ಗೋಪಿ ಅವರಿಗೆ ಶಕ್ರವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು.

ಆದರೆ ಮಾರ್ಗಮಧ್ಯೆ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಲೋ ಡ್ಯಾಡಿ , ಮುತ್ತಿನಂತ ಹೆಂಡತಿ, ಚಿರ ಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಿತಿನ್ ಗೋಪಿ ಬಾಲ ನಟನಾಗಿ ಅಭಿನಯಿಸಿದ್ದಾರೆ.ಮದ್ದೂರು ಸಹೋದರಿಯ ಮನೆಗೆ ಭೇಟಿ ನೀಡಿ , ಆತ್ಮಹತ್ಯೆ ಮಾಡಿಕೊಂಡ ವೈದ್ಯ

ಹರ ಹರ ಮಹದೇವ ಧಾರವಾಹಿ ಸೇರಿದಂತೆ ಇತರೆ ಧಾರವಾಹಿಗಳನ್ನು ನಿರ್ದೇಶಿಸಿದ್ದಂತ ಅವರು, ಹೊಸ ಧಾರವಾಹಿಯೊಂದರ ನಿರ್ದೇಶನಕ್ಕೂ ಸಿದ್ಧತೆ ಮಾಡಿಕೊಂಡಿದ್ದರು.

Share This Article
Leave a comment