January 30, 2026

Newsnap Kannada

The World at your finger tips!

WhatsApp Image 2022 04 05 at 11.28.17 AM

ಆಜಾನ್ ವಿರುದ್ಧ ಮಂತ್ರಪಠಣೆ, ಜೈ ಶ್ರೀರಾಮ್ ಅಭಿಯಾನ ಶುರು ಮಾಡಿದ ಕಾಳೀ ಸ್ವಾಮೀಜಿ

Spread the love

ಮುಸ್ಲಿಮರ ಆಜಾನ್‌ ವಿರುದ್ಧ ದೇವಸ್ಥಾನ ಮತ್ತು ಮಠಗಳಲ್ಲಿ ಮಂತ್ರ ಪಠಣೆ ಮತ್ತು ಜೈ ಶ್ರೀರಾಮ್ ಜಪ ಮಾಡುವ ಅಭಿಯಾನಕ್ಕೆ ಕಾಳೀ ಸ್ವಾಮಿಜಿ ಮಂಗಳವಾರ ಅರಸಿಕೆರೆಯಲ್ಲಿ ಚಾಲನೆ ನೀಡಿದರು.

ಹಾಸನದ ಅರಸೀಕೆರೆ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀಜಿ ಪಠಿಸಿದ್ದಾರೆ. ಇಂದು ಮುಂಜಾನೆ 5:30ಕ್ಕೆ ಧ್ವನಿವರ್ಧಕದ ಮೂಲಕ ಕಾಳಿ ಸ್ವಾಮೀಜಿ ಮಂತ್ರಪಠಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ

ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್‌ ಕೂಗಲು ಅನುಮತಿ ಇದೆ. ಆದರೆ ಎಲ್ಲ ಮಸೀದಿಗಳಲ್ಲಿ ಆಜಾನ್‌ ಕೂಗಲಾಗುತ್ತದೆ. ಅಷ್ಟೇ ಅಲ್ಲದೇ ಆಜಾನ್‌ ಕೂಗಲು‌ ಸ್ಪಷ್ಟವಾದ ಕೋರ್ಟ್‌ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್‌ ಕೂಗಲಾಗುತ್ತದೆ. 

ಈ ರೀತಿ ಆಜಾನ್‌ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹಿಂದೂ ದೇವಾಲಯಗಳಲ್ಲೂ ಭಜನೆ, ಮಂತ್ರವನ್ನು ಪಠಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಸೋಮವಾರ ಎಚ್ಚರಿಕೆ ನೀಡಿದ್ದರು.

error: Content is protected !!