ಕಾಬೂಲ್ ನಲ್ಲಿ ಎರಡು ಸರಣಿ ಸ್ಫೋಟ – 25 ಮಂದಿ ಸಾವು

Team Newsnap
0 Min Read

ಕಾಬುಲ್ ನಲ್ಲಿ ಎರಡು ಸರಣಿ ಸ್ಫೋಟಗಳು ಒಂದರ ಹಿಂದೊಂದು ಸಂಭವಿಸಿದೆ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ.

ಈ ಸ್ಫೋಟದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಇನ್ನು ಸರಣಿ ಸ್ಫೋಟಗಳಾದ ಹತ್ತಿರದಲ್ಲೇ ಮಿಲಿಟರಿ ಆಸ್ಪತ್ರೆಯಿದ್ದ ಕಾರಣ ಅಲ್ಲಿನ ಅನೇಕ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸ್ಫೋಟಕ್ಕೆ ಬಲಿಪಶುಗಳಾಗಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಹಲವು ಬಾರಿ ಆತ್ಮಾಹುತಿ ಬಾಂಬ್ ಸ್ಫೋಟ ಪ್ರಕರಣಗಳ
ವರದಿಯಾಗಿವೆ. ಕಾಬೂಲ್ ಏರ್​ಪೋರ್ಟ್ ಹಾಗೂ ಶಿಯಾ ಸಮುದಾಯದ ಮಸಿದಿಗಳನ್ನು ಗುರಿಯಾಗಿಸಿಕೊಂಡು ಕಳೆದ
ಕೆಲವು ತಿಂಗಳುಗಳಲ್ಲಿ ಸ್ಫೋಟಗಳು ಸಂಭವಿಸಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.

Share This Article
Leave a comment