January 10, 2025

Newsnap Kannada

The World at your finger tips!

download 4 1

K.R.S ಕಂದಾಯ ಗ್ರಾಮ ಘೋಷಣೆ: ಶಾಸಕ ರವೀಂದ್ರ ಶ್ರೀಕಂಠಯ್ಯ ಹೋರಾಟಕ್ಕೆ ಸಂದ ಜಯ

Spread the love
  • ಜನರ ಬಹುದಿನದ ಕನಸು ನನಸು.
  • ನವೆಂಬರ್ 19 ರಂದು ಗೆಜೆಟ್ ನಲ್ಲಿ ಕೃಷ್ಣರಾಜಸಾಗರವನ್ನು ಕಂದಾಯ ಗ್ರಾಮವೆಂದು ಘೋಷಣೆ.
  • 110 ಎಕರೆ ವಿಸ್ತರಣೆ ಜಾಗದಲ್ಲಿ ಗ್ರಾಮ ನಿರ್ಮಾಣ – ರಾಜ್ಯದಲ್ಲೇ ಪ್ರಥಮ ದೊಡ್ಡ ಕಂದಾಯ ಗ್ರಾಮ‌.
  • ಕೃಷ್ಣರಾಜಸಾಗರ ಕಂದಾಯ ಗ್ರಾಮದ ಜನವಸತಿ ಪ್ರದೇಶವಾದ ಸರ್ ಎಂ ವಿಶ್ವೇಶ್ವರಯ್ಯಪುರವನ್ನು ಮಜರೆ ಗ್ರಾಮವನ್ನಾಗಿ ಬದಲಾಯಿಸಲಾಗಿದೆ.
Ravindra Srikantaiah

ಜಿಲ್ಲೆಯ ಕೃಷ್ಣರಾಜಸಾಗರದ ಜನರ, ಸ್ಥಳೀಯ ನಾಯಕರುಗಳ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.

ರಾಜ್ಯ ಸರ್ಕಾರ ನವೆಂಬರ್ 19 ರಂದು ಗೆಜೆಟ್ ನಲ್ಲಿ ಕೃಷ್ಣರಾಜಸಾಗರವನ್ನು ಕಂದಾಯ ಗ್ರಾಮವೆಂದು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೆ ಆರ್ ಎಸ್ ಬಗ್ಗೆ ಇಟ್ಟಿರುವ ಪ್ರೀತಿ, ಅಭಿಮಾನವೂ ಕೂಡ ಜನರಿಗೆ ವರವಾಗಿ ಲಭಿಸಿದೆ.

ಶಾಸಕ ರವೀಂದ್ರ ಶ್ರೀಕಂಠಯ್ಯ, ಗ್ರಾಪಂ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಈ ಗ್ರಾಮ ಸುಮಾರು 110 ಎಕರೆ ವಿಸ್ತೀರ್ಣವಿದ್ದು, ರಾಜ್ಯದಲ್ಲೇ ದೊಡ್ಡ ಕಂದಾಯ ಗ್ರಾಮ ಎನ್ನುವ ಹೆಗ್ಗಳಿಕೆ ಹೊಂದಲಿರುವುದು ಗಮನಾರ್ಹ.

ಕೆ ಆರ್ ಎಸ್ ಹೋರಾಟ ನಡೆದು ಬಂದ ದಾರಿ:

d1052b92 9392 44c4 8852 0bc9a0b52863

1) 1979 ನೇ ಇಸವಿಯಲ್ಲಿ ಕೃಷ್ಣರಾಜಸಾಗರ ಅಧಿಸೂಚಿತ ಪ್ರದೇಶವೆಂದು ಘೋಷಣೆ ಮಾಡಲಾಗಿತ್ತು.

2) ಅಭಿವೃದ್ಧಿಯ ದೃಷ್ಟಿಯಿಂದ 1998 ರಲ್ಲಿ ಕೆ.ಆರ್.ಎಸ್ ಗ್ರಾಪಂ ರಚನೆ ಮಾಡಲಾಯಿತು.

3) 2000 ದಲ್ಲಿ ಗ್ರಾಪಂಗೆ ಪ್ರಥಮ ಚುನಾವಣೆ ನಡೆಯಿತು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಕೃಷ್ಣರಾಜಸಾಗರ ಕಂದಾಯ ಗ್ರಾಮವಾಗಿರಲಿಲ್ಲ. ಬೇರೆ ಗ್ರಾಮದ ಹೆಸರಿನಿಂದ ಗುರುತಿಸಿಕೊಳ್ಳುವುದನ್ನು ತಪ್ಪಿಸುವಂತೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ರಿಂದ ಮನವಿ ಸಲ್ಲಿಯಾಗುತ್ತಲೇ ಇತ್ತು.

4) ಈ ನಡುವೆ 2018 ರಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ, ಕೆ ಆರ್ ಎಸ್ ಡ್ಯಾಂಗೆ ಬಾಗೀನ ಅರ್ಪಿಸಲು ಬಂದಿದ್ದ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗ್ರಾಮ ಮುಖಂಡರೊಂದಿಗೆ ಕಂದಾಯ ಗ್ರಾಮ ಘೋಷಣೆ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದರು.

5) ಈ ಮನವಿಗೆ ಸ್ಪಂಧಿಸಿದ್ದ ಎಚ್ಡಿಕೆ, ಕಂದಾಯ ಗ್ರಾಮವನ್ನು ಕಾರ್ಯ ರೂಪಕ್ಕೆ ತರುವ ಸಂಬಂಧ ಕ್ರಮ ವಹಿಸುವಂತೆ ಜಿಲ್ಲಾಡಳಿಕ್ಕೆ ಸೂಚನೆ ನೀಡಿದ್ದರು.

krs dam dh 1552591201

6) ಆದರೆ ವರ್ಷಗಳೇ ಕಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರವೂ ಅಂತ್ಯವಾಯಿತು.

7) 2019 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡ್ಯಾಂಗೆ ಬಾಗೀನ ಅರ್ಪಿಸಲು ಬಂದಿದ್ದಾಗ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂಧಿಸಿದ ಬಿಎಸ್ ಯಡಿಯೂರಪ್ಪ ಗ್ರಾಮ ಠಾಣಾ ರಚನೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಾರ್ಯರೂಪಕ್ಕೆ ತರುವಂತೆ ಸ್ಥಳದಲ್ಲಿಯೇ ಡಿಸಿ ಗೆ ಸೂಚಿಸಿದ್ದರು.

8) ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಗ್ರಾಮ ಠಾಣಾ ನಿಗದಿಪಡಿಸಿದ, ಹೊಂಗಹಳ್ಳಿ ಮತ್ತು ಹುಲಿಕೆರೆ ಗ್ರಾಮಕ್ಕೆ ಸೇರಿಕೊಂಡಿದ್ದ 148 ಸರ್ವೆ ನಂಬರ್ ಗಳನ್ನು ಸೇರಿಸಿ ಕಂದಾಯ ಗ್ರಾಮದ ವರದಿ ಸಲ್ಲಿಸಿದ್ದರು.

ಅಂತಿಮವಾಗಿ ಎಲ್ಲ ಅಂಶಗಳನ್ನು ಪರಿಶೀಲಿಸಿ ಕಂದಾಯ ಗ್ರಾಮದ ಘೋಷಣೆಯಾಗಿದೆ. ಕೃಷ್ಣರಾಜಸಾಗರ ಕಂದಾಯ ಗ್ರಾಮದ ಜನವಸತಿ ಪ್ರದೇಶವಾದ ಸರ್ ಎಂ ವಿಶ್ವೇಶ್ವರಯ್ಯಪುರವನ್ನು ಮಜರೆ ಗ್ರಾಮವನ್ನಾಗಿ ಬದಲಾಯಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!