December 24, 2024

Newsnap Kannada

The World at your finger tips!

junir kreji

Punjab Result ಸೋಶಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಕೇಜ್ರಿವಾಲ್ ಟ್ರೆಂಡ್..!

Spread the love

ಪಂಜಾಬ್​ ( Punjab)ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಾರ್ಟಿ, ಭರ್ಜರಿ ಗೆಲುವಿನತ್ತ ದಾಪುಗಾಲು ಇಡುತ್ತಿದೆ.

ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಆಪ್​ನ ಗೆಲುವು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ ಪುಟಾಣಿ ಬಾಲಕನೊಬ್ಬ ಭಾರೀ ಗಮನ ಸೆಳೆಯುತ್ತಿದ್ದಾನೆ.

ಆಪ್ ಬೆಂಬಲಿತ ಈ ಬಾಲಕ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ನಂತೆ ಡ್ರೆಸ್​ ತೊಟ್ಟು ಮಿಂಚುತ್ತಿದ್ದಾನೆ.

ಸದ್ಯ ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಪಂಜಾಬ್​ನ 117 ವಿಧಾನಸಭಾ ಕ್ಷೇತ್ರಗಳ ಪೈಕಿಯಲ್ಲಿ ಆಪ್ 90 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಕಾಂಗ್ರೆಸ್​ 14, ಬಿಜೆಪಿ 4 ಕ್ಷೇತ್ರಗಳಲ್ಲಿ ಹಾಗೂ ಇತರೆ ಒಂದು ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ಪಂಜಾಬ್​ಗೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಭಗವಂತ್ ಮನ್ ಸಿಎಂ ಆಗಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!