ಮಂಡ್ಯದಲ್ಲಿ ಪತ್ರಕರ್ತರ ದಿನಾಚರಣೆ : ಸಮಾಜದ ಅಂಕುಡೊಂಕುಗಳನ್ನು ತಿದ್ದಿ – ಪತ್ರಕರ್ತರಿಗೆ ಕರೆ

Team Newsnap
1 Min Read

ಮಂಡ್ಯ ಜಿಲ್ಲೆ ಪತ್ರಕರ್ತರ ಮುದ್ರಣಕಾರರ ಮತ್ತು ವಿತರಕರ ಸಹಕಾರಿ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ 179ನೇ ಕನ್ನಡ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದ ಅಧಿಕಾರಿ ಸ್ವಾಮಿಗೌಡ ಪತ್ರಕರ್ತರು ಕಾರ್ಯದಕ್ಷತೆಯಿಂದ ಸಮಾಜದ ತಪ್ಪನ್ನು ಆಗುಹೋಗುಗಳನ್ನು ನಿಷ್ಠೆಯಿಂದ ವರದಿ ಮಾಡುವುದರ ಮೂಲಕ ಸಮಾಜದ ಡೊಂಕನ್ನು ತಿದ್ದಲು ಕಾಳಜಿಯಿಂದ ಕಾರ್ಯನಿರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸನ್ಮಾನಿತ ಹಿರಿಯ ಪತ್ರಕರ್ತ ದ.ಕೋ .ಹಳ್ಳಿ ಚಂದ್ರಶೇಖರ್ ಮಾತನಾಡಿ ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಸಮಾಜದ ವ್ಯವಸ್ಥೆಗಳನ್ನು ತಿದ್ದು ಕೆಲಸವನ್ನು ಪತ್ರಕರ್ತ ನಿಷ್ಠೆಯಿಂದ ಮಾಡಬೇಕು ಸರ್ಕಾರದ ವೈಫಲ್ಯಗಳನ್ನು ಮುಚ್ಚುಮರೆ ಇಲ್ಲದೆ ಜನತೆಗೆ ತಲುಪಿಸಿ ಅದನ್ನು ಸರಿಪಡಿಸಿ ರಾಜ್ಯದ ಅಭಿವೃದ್ಧಿ ಪಥದತ್ತ ಸಾಗಲು ಕಾರಣಕರ್ತರಾಗಬೇಕು ಸಾಮಾಜಿಕ ಭದ್ರತೆ ಎಲ್ಲರಲ್ಲೂ ಕೂಡ ಸ್ಥಿರವಾಗಿ ನಿಂತು ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕ ನುಡಿಯಾಡಿದ ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ ಪತ್ರಿಕೆ ನಡೆದು ಬಂದ ಹಾದಿಯನ್ನು ವಿವರಿಸಿ ಪತ್ರಿಕಾ ಧರ್ಮ ಅತ್ಯಂತ ಶ್ರೇಷ್ಠವಾಗಿದ್ದು ಪತ್ರಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಸಮಾಜದ ಡೊಂಕನ್ನು ತಿದ್ದುವ ಕಾರ್ಯವನ್ನು ಮಾಡಬೇಕು ಎಂದರು.

ಕೊಡಗಿನಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ- ಜನರಿಗೆ ಆತಂಕ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಸಿ ಮಂಜುನಾಥ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಪುಟ್ಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು.

Share This Article
Leave a comment