ಜೋಗ್ ಜಲಪಾತ ದ ಅಭಿವೃದ್ಧಿ: 120 ಕೋಟಿ ರು. ಯೋಜನೆಗೆ ಒಪ್ಪಿಗೆ

Team Newsnap
1 Min Read

ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ ನೂರು ಇಪ್ಪತ್ತು ಕೋಟಿ ರೂ ವೆಚ್ಚದ ಬೃಹತ್ ಯೋಜನೆಯೊಂದಿಗೆ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟದ ಸಭೆಯಲ್ಲಿ ಈ ಕುರಿತಂತೆ ಅನುಮೋದನೆ ನೀಡಲಾಗಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರ ಮನವಿಯ ಮೇರೆಗೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಶೇಷತೆಗಳನ್ನು ರೂಪಿಸಲಾಗಿದೆ ವರ್ಷಪೂರ್ತಿ ಜಲಪಾತ ವೀಕ್ಷಣೆ ಮಾಡುವುದು, ದೀಪಾಲಂಕಾರ, ಮಕ್ಕಳ ಪಾರ್ಕ್ ,ದೋಣಿ ವಿಹಾರ, ಹೋಟೆಲ್, ಹೋಟೆಲ್ ವಸತಿ ಗೃಹಗಳು,ಜಲಸಾಹಸ ಕ್ರೀಡೆ, ಪಾರ್ಕಿಂಗ್ ಹಾಗೂ ಕೇಬಲ್ ಕಾರ್ ಅಳವಡಿಸಲು ಯೋಜನೆ ರೂಪಿಸಲಾಗಿದೆ

Share This Article
Leave a comment