J&K ಕಾರಾಗೃಹ DGP ಯನ್ನೇ ಕತ್ತು ಸೀಳಿ ಹತ್ಯೆ – ಗೃಹ ಸಚಿವರ ಭೇಟಿ ವೇಳೆಯಲ್ಲೇ ದುರಂತ

Team Newsnap
1 Min Read
J&K Jail DGP strangled to death - Tragedy during Home Minister's visit J&K ಕಾರಾಗೃಹ DGP ಯನ್ನೇ ಕತ್ತು ಸೀಳಿ ಹತ್ಯೆ - ಗೃಹ ಸಚಿವರ ಭೇಟಿ ವೇಳೆಯಲ್ಲೇ ದುರಂತ

ಜಮ್ಮು ಮತ್ತು ಕಾಶ್ಮೀರದ ಕಾರಾಗೃಹದ DG H K ಹೇಮಂತ್ ಲೋಹಿಯಾ (57) ಅವರನ್ನು ನಿವಾಸದಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.

ಈ ಹತ್ಯೆಯನ್ನು TRP ಉಗ್ರ ಸಂಘಟನೆ ಮಾಡಿದೆ ಎಂದು ಹೇಳಲಾಗಿದೆ . ಮೂರು ದಿನಗಳ ಕಾಲ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮಿರಕ್ಕೆ ಭೇಟಿ ನೀಡಲಿದ್ದಾರೆ. ಇಂದಿನಿಂದ ಪ್ರವಾಸ ಆರಂಭ ವಾಗಲಿದೆ. ಈ ವೇಳೆಯಲ್ಲಿ ದುರಂತ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಲೋಹಿಯಾ ಅವರು ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕತ್ತು ಸೀಳಿ ಅವರನ್ನು ಹತ್ಯೆ ಮಾಡಲಾಗಿದೆ.

ಅವರನ್ನು ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲುಗಳ ಮಹಾನಿರ್ದೇಶಕರಾಗಿ ನೇಮಿಸಲಾಗಿತ್ತು. ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾತನಾಡಿ, ಮನೆಯ ಸಹಾಯಕ ಪರಾರಿಯಾಗಿದ್ದಾನೆ ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a comment