ಹಂತಕರ ಗುಂಡಿಗೆ ಜಾರ್ಖಂಡ್ ನಟಿ ರಿಯಾ ಕುಮಾರಿ ಬಲಿ

Team Newsnap
1 Min Read
Jharkhand actress Rhea Kumari was killed by assassins ಹಂತಕರ ಗುಂಡಿಗೆ ಜಾರ್ಖಂಡ್ ನಟಿ ರಿಯಾ ಕುಮಾರಿ ಬಲಿ

ಜಾರ್ಖಂಡ್ ( Jharkhand ) ರಾಜ್ಯದ ಹೆಸರಾಂತ ನಟಿ ( actress ) ರಿಯಾ ಕುಮಾರಿಯನ್ನು ( Rhea Kumari ) ಅಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸುದ್ದಿ ಜಾರ್ಖಂಡ್ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ನಟಿ ರಿಯಾ ( Rhea ) ಪತಿಯೇ ಈ ಹೇಳಿಕೆ ನೀಡಿದ್ದು, ತಮ್ಮ ಪುತ್ರಿ ಮತ್ತು ಪತ್ನಿ ಜೊತೆ ರಾಂಚಿಯಿಂದ ಕೊಲ್ಕತ್ತಾಗೆ ( Kolkata ) ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಪಶ್ಚಿಮ ಬಂಗಾಳದ ಹೌರಾದಲ್ಲಿ ವಿಶ್ರಾಂತಿಗಾಗಿ ಮಹಿಷ್ರೇಕಾ ಬ್ರಿಡ್ಜ್‌ ಬಳಿ ಕಾರು ನಿಲ್ಲಿಸಿದ್ದಾರೆ. ಆಗ ಬೈಕಿನಲ್ಲಿ ಬಂದ ಮೂವರು ದರೋಡೆಗೆ ಯತ್ನಿಸಿದ್ದಾರೆ. ದರೋಡೆಕೋರರನ್ನು ತಡೆಯಲು ಬಂದಿದ್ದ ರಿಯಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು

ಕೂಡಲೇ ರಿಯಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿದಿಲ್ಲ. ಕಿವಿಯೊಳಗೆ ಬುಲೆಟ್ ಹೊಕ್ಕಿದ್ದು, ತೀವ್ರ ಗಾಯವಾದ ಹಿನ್ನೆಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪತಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರಂತೆ.

Share This Article
Leave a comment