ಮಂಡ್ಯದ ಪಿಇಎಸ್ ಕಾಲೇಜಿನ ಆವರಣದಲ್ಲಿ ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮನೆಗೆ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಭೇಟಿ ನೀಡಿ ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದರು.
ಇಂದು ಇಮ್ರಾನ್ ಪಾಷಾ ಆಕೆಯ ಮನೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು
ನಿನ್ನೆ ನಡೆದ ಘಟನೆ ಬಗ್ಗೆ ಬೇಸರವಾಗಿದೆ. ಹೀಗಾಗಿ ಇಂದು ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾತನಾಡಿದ್ದೇನೆ. ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದರುಬ
ಈಘಟನೆ ಬಗ್ಗೆ ಅವರು ಕಾನೂನಾತ್ಮಕವಾಗಿ ಯಾವುದೇ ಕ್ರಮ ತೆಗೆದುಕೊಂಡರೂ ಅವರೊಂದಿಗೆ ನಾನು ಇರುತ್ತೇನೆ ಎಂದು ಇಮ್ರಾನ್ ಪಾಷಾ ತಿಳಿಸಿರುವುದಾಗಿ ಹೇಳಿದರು
ಮುಸ್ಕಾನ್ ಕುಟುಂಬಕ್ಕೆ ಯಾರಾದರೂ ಹಲ್ಲೆ ಅಥವಾ ತೊಂದರೆ ಕೊಡಲು ಬಂದರೆ ಪೊಲೀಸ್ ಠಾಣೆಗೆ ದೂರು ಕೊಡಲು ಹೇಳಿದ್ದೇನೆ. ಸರ್ಕಾರದ ಜೊತೆ ಮಾತನಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಇರುತ್ತೇನೆ. ಜೈ ಶ್ರೀರಾಮ್ ಎಂದು ಕೂಗುವುದರಲ್ಲಿ ತಪ್ಪೇನಿಲ್ಲ. ಆದರೆ ಆ ವಿದ್ಯಾರ್ಥಿಗಳನ್ನು ಯಾರೋ ಪ್ರಚೋದನೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು