February 21, 2026

Newsnap Kannada

The World at your finger tips!

srinivas jds

ಜೆಡಿಎಸ್ ಬಾಗಿಲು ಬಂದ್ : ಭವಿಷ್ಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಸಂಪರ್ಕದಲ್ಲಿದ್ದೇನೆ: ಬೆಮೆಲ್ ಕಾಂತರಾಜು

Spread the love

ನನ್ನ ಪಾಲಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ. ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತರಾಜು ತುರುವೇಕೆರೆಯಲ್ಲಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು. ಕುಮಾರಸ್ವಾಮಿ ಎಂ ಟಿ ಕೃಷ್ಣಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಹೀಗಾಗಿ ನಂಗೆ ಜೆಡಿಎಸ್ ನಲ್ಲಿ ಭವಿಷ್ಯ ಮಂಕಾಗಿದೆ ಎಂದರು.

ಹೆಚ್‍ಡಿಕೆಗೆ ಈ ಮಾತುಗಳು ಎಷ್ಟು ಶೋಭೆ ತರುತ್ತವೆ. ಒಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ನಾಯಕರನ್ನು ಬೆಳೆಸೋದು ಅವರಿಗೆ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಅತಂತ್ರರಾದ ಶ್ರೀನಿವಾಸ್

ಸ್ವಪಕ್ಷದ ವಿರುದ್ಧವೇ ಹೇಳಿಕೊಡುತ್ತಾ ತಮ್ಮ ನಾಯಕರ ವಿರುದ್ಧ ಆಗಾಗ ಗುಡುಗುತ್ತಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್‍ಗೆ ಇಂದಿನಿಂದ ಅಧಿಕೃತವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ. ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ನಾಯಕನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬಾಗಿಲು ಮುಚ್ಚಿದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ತೀರ್ಮಾನಕ್ಕೆ ವರಿಷ್ಠ ದೇವೇಗೌಡರು ಅಧಿಕೃತ ಮೊಹರು ಒತ್ತಿದ್ದಾರೆ. ಈ ನಡುವೆ ಶಾಸಕ ಶ್ರೀನಿವಾಸ್‍ಗೆ ಇತ್ತ ಜೆಡಿಎಸ್ ಇಲ್ಲದೇ, ಅತ್ತ ಕಾಂಗ್ರೆಸ್ ಅಲ್ಲದ ಅತಂತ್ರಭಾವ ಮೂಡಿದೆ.

error: Content is protected !!